Tuesday, July 21, 2026
Homeಗ್ಯಾಜೆಟ್ / ಟೆಕ್ಆಂಡ್ರಾಯ್ಡ್ ಬ್ಯಾಕಪ್‌ಗೆ ಹೊಸ ನಿಯಮ; ಗೂಗಲ್ ಸ್ಟೋರೇಜ್ ಇನ್ನು ಕಡ್ಡಾಯ.

ಆಂಡ್ರಾಯ್ಡ್ ಬ್ಯಾಕಪ್‌ಗೆ ಹೊಸ ನಿಯಮ; ಗೂಗಲ್ ಸ್ಟೋರೇಜ್ ಇನ್ನು ಕಡ್ಡಾಯ.

ನವದೆಹಲಿ : ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಬದಲಾವಣೆಯೊಂದನ್ನು ಗೂಗಲ್ ಹಂತ ಹಂತವಾಗಿ ಜಾರಿಗೆ ತರುತ್ತಿದೆ. ಹೊಸ Android Backup Storage Policy ಅಡಿಯಲ್ಲಿ, ಇದುವರೆಗೆ ಉಚಿತವಾಗಿದ್ದ ಆಂಡ್ರಾಯ್ಡ್ ಡಿವೈಸ್ ಬ್ಯಾಕಪ್‌ಗಳು ಇನ್ನು ಮುಂದೆ ಬಳಕೆದಾರರ Google Account Storage (15GB) ಯಲ್ಲೇ ಲೆಕ್ಕಕ್ಕೆ ಸೇರುವುದಾಗಿ ವರದಿಯಾಗಿದೆ.

ಹೊಸ ನಿಯಮ ಜಾರಿಯಾಗುವ ಸುಮಾರು 45 ದಿನಗಳ ಮುಂಚಿತವಾಗಿ ಬಳಕೆದಾರರಿಗೆ ಇ-ಮೇಲ್ ಮೂಲಕ ಗೂಗಲ್ ಮಾಹಿತಿ ನೀಡುತ್ತಿದೆ. ಈ ಅವಧಿಯಲ್ಲಿ ಅಗತ್ಯವಿದ್ದರೆ ಸ್ಟೋರೇಜ್ ಖಾಲಿ ಮಾಡಿಕೊಳ್ಳಲು ಅಥವಾ ಹೆಚ್ಚುವರಿ ಕ್ಲೌಡ್ ಸ್ಟೋರೇಜ್ ಖರೀದಿಸಲು ಅವಕಾಶ ನೀಡಲಾಗುತ್ತದೆ.

ಹೊಸ ನೀತಿಯ ಪ್ರಕಾರ, SMS, ಕರೆಗಳ ಇತಿಹಾಸ, ಡಿವೈಸ್ ಸೆಟ್ಟಿಂಗ್‌ಗಳು, ಆಪ್ ಸೆಟ್ಟಿಂಗ್‌ಗಳು ಹಾಗೂ ಇತರ ಬ್ಯಾಕಪ್ ಡೇಟಾ Google Account ಸ್ಟೋರೇಜ್‌ನಲ್ಲಿ ಜಾಗ ಬಳಸಲಿವೆ.

ಸ್ಟೋರೇಜ್ ಮಿತಿ ಮೀರಿದರೆ ಹೊಸ Automatic Backup ಆಗುವುದಿಲ್ಲ. ಬಳಕೆದಾರರು ಅನಗತ್ಯ ಫೈಲ್‌ಗಳನ್ನು ಅಳಿಸುವುದು, ಹೆಚ್ಚುವರಿ Google One ಸ್ಟೋರೇಜ್ ಖರೀದಿಸುವುದು ಅಥವಾ ಬ್ಯಾಕಪ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಅಗತ್ಯವಾಗುತ್ತದೆ.

ಇದೇ ವೇಳೆ, Android 9 ಮತ್ತು ಅದಕ್ಕಿಂತ ಮೇಲಿನ ಆವೃತ್ತಿಗಳಲ್ಲಿ ಹೊಸ ಬ್ಯಾಕಪ್ ನಿಯಂತ್ರಣಗಳನ್ನೂ ಗೂಗಲ್ ಪರಿಚಯಿಸುತ್ತಿದೆ. ಬಳಕೆದಾರರು ಯಾವ ಆಪ್‌ಗಳು ಮತ್ತು ಯಾವ ಡೇಟಾವನ್ನು ಬ್ಯಾಕಪ್ ಮಾಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ವರದಿಗಳ ಪ್ರಕಾರ, ಹೆಚ್ಚಿನ ಬಳಕೆದಾರರ ಬ್ಯಾಕಪ್ ಗಾತ್ರವು ಸರಾಸರಿ 30–40 MB ಮಾತ್ರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಬಹುತೇಕರಿಗೆ ಸ್ಟೋರೇಜ್ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular