Tuesday, July 14, 2026
Homeಜಿಲ್ಲೆಮಂಗಳೂರು : ಹೃದಯಾಘಾತದಿಂದ ಬಜಾಲ್‌ನ ಅಮೃತ್ ಕ್ಲಿನಿಕ್ ವೈದ್ಯ ಡಾ. ಕೃಷ್ಣ ಪ್ರಶಾಂತ್ ನಿಧನ.

ಮಂಗಳೂರು : ಹೃದಯಾಘಾತದಿಂದ ಬಜಾಲ್‌ನ ಅಮೃತ್ ಕ್ಲಿನಿಕ್ ವೈದ್ಯ ಡಾ. ಕೃಷ್ಣ ಪ್ರಶಾಂತ್ ನಿಧನ.

ಮಂಗಳೂರು : ಮಂಗಳೂರಿನ ಬಜಾಲ್‌ನ ಪ್ರಗತಿ ನಗರ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೃತ್ ಕ್ಲಿನಿಕ್‌ನ ವೈದ್ಯರಾದ ಡಾ. ಕೃಷ್ಣ ಪ್ರಶಾಂತ್ ಅವರು ಇಂದು ಬೆಳಿಗ್ಗೆ ಕ್ಲಿನಿಕ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಬಜಾಲ್ ಪರಿಸರದಲ್ಲಿ ಕ್ಯಾತಿ ಪಡೆದಿದ್ದ ಡಾ. ಕೃಷ್ಣ ಪ್ರಶಾಂತ್ ಅವರ ಅಕಾಲಿಕ ನಿಧನವು ಕುಟುಂಬಸ್ಥರು, ಸ್ನೇಹಿತರು, ರೋಗಿಗಳು ಹಾಗೂ ವೈದ್ಯಕೀಯ ವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular