Sunday, August 16, 2026
Homeಕ್ರೈಂಮೈಸೂರು : 25 ವರ್ಷದ ದಾಂಪತ್ಯಕ್ಕೆ ರಕ್ತದ ಅಂತ್ಯ: ಕುಡಿದು ಮಲಗಿದ್ದ ಗಂಡನನ್ನು ಹಗ್ಗದಿಂದ ಬಿಗಿದು...

ಮೈಸೂರು : 25 ವರ್ಷದ ದಾಂಪತ್ಯಕ್ಕೆ ರಕ್ತದ ಅಂತ್ಯ: ಕುಡಿದು ಮಲಗಿದ್ದ ಗಂಡನನ್ನು ಹಗ್ಗದಿಂದ ಬಿಗಿದು ಕೊಂದ ಶಿಕ್ಷಕಿ..!

ಮೈಸೂರು : ಮೈಸೂರಿನಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 25 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ 50 ವರ್ಷದ ನಿತ್ಯಾನಂದ ಅವರನ್ನು ಅವರ ಪತ್ನಿ ಸುಶೀಲಾ (ಖಾಸಗಿ ಶಾಲೆಯ ಶಿಕ್ಷಕಿ) ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ದಂಪತಿ ನಡುವೆ ಬಹುಕಾಲದಿಂದ ಕುಟುಂಬ ಕಲಹ, ಆಸ್ತಿ ವಿಚಾರ ಹಾಗೂ ಇತರೆ ಕಾರಣಗಳಿಂದ ನಿರಂತರ ಜಗಳ ನಡೆಯುತ್ತಿತ್ತು. ಘಟನೆ ನಡೆದ ರಾತ್ರಿ ನಿತ್ಯಾನಂದ ಮದ್ಯ ಸೇವಿಸಿ ಮನೆಗೆ ಬಂದು ಮಲಗಿದ್ದ ವೇಳೆ ಸುಶೀಲಾ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.

ಕೊಲೆ ಬಳಿಕ ಪ್ರಕರಣವನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಆರೋಪಿ, ಬೆಳಗ್ಗೆ ನಿತ್ಯಾನಂದ ಅವರ ಸಹೋದರನಿಗೆ ಕರೆ ಮಾಡಿ “ಹೃದಯಾಘಾತದಿಂದ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾಳೆ. ಆದರೆ ಮೃತದೇಹದ ಕುತ್ತಿಗೆಯಲ್ಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಸಹೋದರ ಅನುಮಾನಗೊಂಡು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ತನ್ನ ಪತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಪೊಲೀಸರು ಆಕೆಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular