Sunday, August 16, 2026
Homeವಿದೇಶಕೋಪನ್ ಹೆಗನ್ : ಆಜಾನ್‌ಗೆ ಬ್ರೇಕ್ ಹಾಕಲು ಡೆನ್ಮಾರ್ಕ್ ಸಜ್ಜು ; ದೇಶವ್ಯಾಪಿ ನಿಷೇಧದ ಚಿಂತನೆ..!

ಕೋಪನ್ ಹೆಗನ್ : ಆಜಾನ್‌ಗೆ ಬ್ರೇಕ್ ಹಾಕಲು ಡೆನ್ಮಾರ್ಕ್ ಸಜ್ಜು ; ದೇಶವ್ಯಾಪಿ ನಿಷೇಧದ ಚಿಂತನೆ..!

ಕೋಪನ್‌ಹೇಗನ್ : ಮಸೀದಿಗಳಿಂದ ಧ್ವನಿವರ್ಧಕದ ಮೂಲಕ ಪ್ರಸಾರವಾಗುವ ಆಜಾನ್‌ಗೆ ರಾಷ್ಟ್ರವ್ಯಾಪಿ ನಿಷೇಧ ಹೇರುವ ಸಾಧ್ಯತೆಯನ್ನು ಡೆನ್ಮಾರ್ಕ್ ಸರ್ಕಾರ ಪರಿಶೀಲಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಲಸೆ ಮತ್ತು ಏಕೀಕರಣ ಸಚಿವ ಮೋರ್ಟೆನ್ ಬೋಡ್ಸ್ಕೋವ್, ಈ ಸಂಬಂಧ ಕಾನೂನುಬದ್ಧ ಸಾಧ್ಯತೆಗಳ ಪರಿಶೀಲನೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವರು, “ಡೆನ್ಮಾರ್ಕ್‌ನ ಬೀದಿಗಳಲ್ಲಿ ನಡೆಯುವಾಗ ಅದು ಇಸ್ಲಾಮಾಬಾದ್‌ನ ಉಪನಗರದಂತಿರಬಾರದು. ಆಜಾನ್ ಡ್ಯಾನಿಶ್ ಮನೆಮೇಲೆ ಕೇಳಿಸಬಾರದು” ಎಂದು ಹೇಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೇ ವಿಷಯವಾಗಿ 2020 ಮತ್ತು 2025ರಲ್ಲೂ ಪ್ರಯತ್ನ ನಡೆದಿದ್ದರೂ ಕಾನೂನಾಗಿ ಜಾರಿಯಾಗಿರಲಿಲ್ಲ.

ಪ್ರಸ್ತುತ ಡೆನ್ಮಾರ್ಕ್‌ನ ಕೆಲವು ನಗರಗಳಲ್ಲಿ ಸ್ಥಳೀಯ ಶಬ್ದ ನಿಯಮಗಳ ಕಾರಣ ಧ್ವನಿವರ್ಧಕದ ಮೂಲಕ ಆಜಾನ್ ಪ್ರಸಾರಕ್ಕೆ ಈಗಾಗಲೇ ನಿರ್ಬಂಧಗಳಿವೆ. ಈಗ ದೇಶಾದ್ಯಂತ ಏಕರೂಪದ ನಿಯಮ ಜಾರಿಗೆ ತರಲು ಸರ್ಕಾರ ಕಾನೂನು ಪರಿಶೀಲನೆ ನಡೆಸುತ್ತಿದೆ. ಆದರೆ ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular