Sunday, June 28, 2026
Homeಜಿಲ್ಲೆಮಡಿಕೇರಿ : ಆಟಿಕೆಯ ಎಲ್‌ಇಡಿ ಬಲ್ಬ್ ನುಂಗಿದ 8 ತಿಂಗಳ ಮಗು ; ವೈದ್ಯರ ಸಮಯೋಚಿತ...

ಮಡಿಕೇರಿ : ಆಟಿಕೆಯ ಎಲ್‌ಇಡಿ ಬಲ್ಬ್ ನುಂಗಿದ 8 ತಿಂಗಳ ಮಗು ; ವೈದ್ಯರ ಸಮಯೋಚಿತ ಚಿಕಿತ್ಸೆಯಿಂದ ಉಳಿದ ಜೀವ..!

ಮಡಿಕೇರಿ : ಆಟಿಕೆಯಲ್ಲಿದ್ದ ಸಣ್ಣ ಎಲ್‌ಇಡಿ ಬಲ್ಬ್‌ನ್ನು 8 ತಿಂಗಳ ಮಗು ಆಟವಾಡುವ ವೇಳೆ ನುಂಗಿ ಅಪಾಯಕ್ಕೆ ಸಿಲುಕಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಗು ನಿರಂತರವಾಗಿ ಅಳುತ್ತಿದ್ದು, ನಂತರ ಉಸಿರಾಟದಲ್ಲೂ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಎಕ್ಸ್-ರೇ ಪರೀಕ್ಷೆಯಲ್ಲಿ ಮಗುವಿನ ಗಂಟಲಿನಲ್ಲಿ ಎಲ್‌ಇಡಿ ಬಲ್ಬ್ ಸಿಲುಕಿರುವುದು ಪತ್ತೆಯಾಯಿತು.

ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ ಎಲ್‌ಇಡಿ ಬಲ್ಬ್ ಅನ್ನು ಯಶಸ್ವಿಯಾಗಿ ಹೊರತೆಗೆದರು. ಸಕಾಲದಲ್ಲಿ ಚಿಕಿತ್ಸೆ ದೊರೆತ ಪರಿಣಾಮ ಮಗು ಅಪಾಯದಿಂದ ಪಾರಾಗಿದೆ.

ಪೋಷಕರಿಗೆ ವೈದ್ಯರ ಸಲಹೆ :
ಸಣ್ಣ ಭಾಗಗಳಿರುವ ಆಟಿಕೆಗಳನ್ನು ಪುಟ್ಟ ಮಕ್ಕಳಿಗೆ ನೀಡಬೇಡಿ.ಮಕ್ಕಳು ಆಟವಾಡುವಾಗ ನಿರಂತರ ನಿಗಾ ವಹಿಸಿ.ಯಾವುದೇ ವಸ್ತು ನುಂಗಿರುವ ಶಂಕೆ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular