Sunday, June 7, 2026
Flats for sale
Homeಗ್ಯಾಜೆಟ್ / ಟೆಕ್ಲಂಡನ್ : ಎಐ ಆಧಾರಿತ ಕೊರೊನಾ ಲಸಿಕೆ ಪ್ರಯೋಗ ಯಶಸ್ವಿ; ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು.

ಲಂಡನ್ : ಎಐ ಆಧಾರಿತ ಕೊರೊನಾ ಲಸಿಕೆ ಪ್ರಯೋಗ ಯಶಸ್ವಿ; ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು.

ಲಂಡನ್ : ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆ ಮಾನವರ ಮೇಲಿನ ಪ್ರಾಥಮಿಕ ಪ್ರಯೋಗದಲ್ಲಿ ಯಶಸ್ಸು ಕಂಡಿದೆ. ಈ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದು ಯೂನಿವರ್ಸಿಟಿ ಆ ಕೇಂಬ್ರಿಜ್ ಸಂಶೋಧಕರ ತಂಡವಾಗಿದ್ದು, ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲದೆ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಲಾಗಿದೆ.

ಸಂಶೋಧಕರ ಪ್ರಕಾರ, ಈ ಲಸಿಕೆಯ ವಿನ್ಯಾಸವನ್ನು ಮಾನವರು ನೇರವಾಗಿ ರೂಪಿಸಿಲ್ಲ. ಬದಲಾಗಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯೇ ವೈರಸ್‌ಗಳ ಆನುವಂಶಿಕ ಮಾಹಿತಿಯನ್ನು ವಿಶ್ಲೇಷಿಸಿ ಲಸಿಕೆಯ ಪ್ರಮುಖ ಅಂಶವಾದ ಆಂಟಿಜೆನ್ (ಪ್ರತಿಜನಕ) ಅನ್ನು ರೂಪಿಸಿದೆ.

ಭವಿಷ್ಯದ ಕೊರೊನಾ ವೈರಸ್‌ಗಳಿಗೂ ರಕ್ಷಣೆ?

ಈ ಹೊಸ ಲಸಿಕೆ ಕೇವಲ ಕೋವಿಡ್-19ಕ್ಕೆ ಕಾರಣವಾದ SARS-CoV-2 ವೈರಸ್ ವಿರುದ್ಧ ಮಾತ್ರವಲ್ಲದೆ, ಭವಿಷ್ಯದಲ್ಲಿ ಮಾನವರಿಗೆ ಸೋಂಕು ಉಂಟುಮಾಡುವ ಸಾಧ್ಯತೆಯಿರುವ ಇತರೆ ಕೊರೊನಾ ವೈರಸ್‌ಗಳ ವಿರುದ್ಧವೂ ರಕ್ಷಣೆ ನೀಡುವ ಉದ್ದೇಶ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.ಅಧ್ಯಯನದ ಫಲಿತಾಂಶಗಳು ಜರ್ನಲ್ ಆ ಇನ್ಫೆಕ್ಷನ್ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಎಐ ಹೇಗೆ ಸಹಾಯ ಮಾಡಿತು?

ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಹಾಗೂ DIOSynVax ಸಂಸ್ಥೆಯ ವಿಜ್ಞಾನಿಗಳು ವಿಶ್ವದ ವಿವಿಧ ಭಾಗಗಳಲ್ಲಿ ಕಂಡುಬಂದ ಸರ್ಬೆಕೊ (Sarbeco) ಕುಟುಂಬದ ಕೊರೊನಾ ವೈರಸ್‌ಗಳ ಆನುವಂಶಿಕ ಮಾಹಿತಿಯನ್ನು ಎಐ ಮೂಲಕ ವಿಶ್ಲೇಷಿಸಿದರು. ಈ ವಿಶ್ಲೇಷಣೆಯ ಮೂಲಕ ವೈರಸ್‌ಗಳಲ್ಲಿರುವ ಸಾಮಾನ್ಯ ಲಕ್ಷಣಗಳನ್ನು ಗುರುತಿಸಿ, ಅವುಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಏಕೈಕ ಪ್ರತಿಜನಕವನ್ನು ವಿನ್ಯಾಸಗೊಳಿಸಲಾಗಿದೆ.

ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೆ ಸಿದ್ಧತೆ

ನಿರ್ದಿಷ್ಟ ವೈರಸ್ ತಳಿಯ ವಿರುದ್ಧ ಮಾತ್ರವಲ್ಲದೆ, ಭವಿಷ್ಯದಲ್ಲಿ ಉದ್ಭವಿಸಬಹುದಾದ ಹೊಸ ಕೊರೊನಾ ವೈರಸ್‌ಗಳ ವಿರುದ್ಧವೂ ರಕ್ಷಣೆ ಒದಗಿಸುವ ಲಸಿಕೆ ಅಭಿವೃದ್ಧಿಪಡಿಸುವುದು ಈ ಸಂಶೋಧನೆಯ ಪ್ರಮುಖ ಗುರಿಯಾಗಿದೆ. ತಜ್ಞರ ಅಭಿಪ್ರಾಯದಂತೆ, ಎಐ ತಂತ್ರಜ್ಞಾನ ಬಳಸಿ ಲಸಿಕೆ ಅಭಿವೃದ್ಧಿಪಡಿಸುವುದು ಭವಿಷ್ಯದ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಟದಲ್ಲಿ ಮಹತ್ವದ ತಿರುವಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular