Saturday, May 23, 2026
Flats for sale
Homeರಾಜ್ಯಮಂಗಳೂರು ; ಮುಂದಿನ ಚುನಾವಣೆಯಲ್ಲಿ ತೆರೆಮರೆಗೆ ಸರಿಯಲಿದ್ದಾರಾ ಇಬ್ಬರು ಹಾಲಿ ಶಾಸಕರು..!? ದಕ್ಷಿಣ ಕನ್ನಡ ಬಿಜೆಪಿಯಲ್ಲಿ...

ಮಂಗಳೂರು ; ಮುಂದಿನ ಚುನಾವಣೆಯಲ್ಲಿ ತೆರೆಮರೆಗೆ ಸರಿಯಲಿದ್ದಾರಾ ಇಬ್ಬರು ಹಾಲಿ ಶಾಸಕರು..!? ದಕ್ಷಿಣ ಕನ್ನಡ ಬಿಜೆಪಿಯಲ್ಲಿ ತೀವ್ರ ಕಳವಳ!

ಮಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜಕಾರಣದಲ್ಲಿ ಅತ್ಯಂತ ಆಘಾತಕಾರಿ ಹಾಗೂ ಸಂಚಲನ ಮೂಡಿಸುವ ಸುದ್ದಿಯೊಂದು ಹರಿದಾಡುತ್ತಿದೆ. ಕಲಡ್ಕ ಭಟ್ ಅವರ ಆಪ್ತರಾದ ಜಿಲ್ಲೆಯ ಇಬ್ಬರು ಪ್ರಭಾವಿ ಹಾಲಿ ಶಾಸಕರು ಮುಂದಿನ ಚುನಾವಣಾ ಕಣದಿಂದ ತೆರೆಮರೆಗೆ ಸರಿಯಲಿದ್ದಾರೆ ಎಂಬ ದಟ್ಟ ವದಂತಿಗಳು ಕೇಳಿಬರುತ್ತಿದ್ದು, ಇದು ಕರಾವಳಿ ಬಿಜೆಪಿಯಲ್ಲಿ ತೀವ್ರ ಆತಂಕ ಹಾಗೂ ಕಳವಳಕ್ಕೆ ಕಾರಣವಾಗಿದೆ.

ಉಮಾನಾಥ್ ಕೋಟ್ಯಾನ್ ಚುನಾವಣಾ ಕಣದಿಂದ ಔಟ್!?
ಮೂಲಗಳ ಪ್ರಕಾರ, ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಹಾಲಿ ಜನಪ್ರಿಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಾ ಕಣದಿಂದ ಹಿಂದೆ ಸರಿಯುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ಸಮಯದಿಂದ ಅವರು ಎದುರಿಸುತ್ತಿರುವ ಅನಾರೋಗ್ಯದ ಸಮಸ್ಯೆಯೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಕ್ಷೇತ್ರದಾದ್ಯಂತ ಉತ್ತಮ ಹಿಡಿತ ಹೊಂದಿರುವ ಕೋಟ್ಯಾನ್ ಅವರು ಆರೋಗ್ಯದ ಹಿತದೃಷ್ಟಿಯಿಂದ ಚುನಾವಣಾ ರಾಜಕೀಯದಿಂದ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿರುವುದು ಪಕ್ಷದ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ರಾಜಕೀಯ ಸಾಕು ಎನ್ನುತ್ತಿರುವ ರಾಜೇಶ್ ನಾಯ್ಕ್ : ಬಂಟ್ವಾಳದಲ್ಲೂ ಬದಲಾವಣೆ?….

ಇನ್ನೊಂದೆಡೆ ಬಂಟ್ವಾಳ ಕ್ಷೇತ್ರದ ಹಾಲಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕೂಡ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಅಪ್ಪಟ ಕೃಷಿಕರಾಗಿರುವ ಅವರು ವಯೋನಿಮಿತ್ತ ಕಾರಣಗಳಿಂದ ರಾಜಕೀಯ ಸಾಕು ಎಂದು ಚುನಾವಣಾ ಕಣದಿಂದ ದೂರ ಉಳಿಯುವ ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ. ಬಂಟ್ವಾಳದಂತಹ ಹೈವೋಲ್ಟೇಜ್ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ಅವರ ಈ ನಡೆ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ಹೊಸ ಮುಖಗಳಿಗೆ, ಯುವಕರಿಗೆ ಮಣೆ ಹಾಕಲು ಕಾರ್ಯಕರ್ತರ ಒತ್ತಡ!
ಜಿಲ್ಲೆಯ ಇಬ್ಬರು ಹಾಲಿ ಶಾಸಕರು ಒಟ್ಟಿಗೇ ಹಿಂದೆ ಸರಿಯುವ ಮುನ್ಸೂಚನೆ ಸಿಗುತ್ತಿದ್ದಂತೆ, ಇತ್ತ ಎರಡೂ ಕ್ಷೇತ್ರಗಳ ತಳಮಟ್ಟದ ಕಾರ್ಯಕರ್ತರು ಅಲರ್ಟ್ ಆಗಿದ್ದಾರೆ. ಈ ಬಾರಿ ಹಳಬರ ಬದಲಿಗೆ ಸಂಪೂರ್ಣ ಹೊಸ ಮುಖಗಳಿಗೆ ಹಾಗೂ ಪಕ್ಷಕ್ಕಾಗಿ ದುಡಿದ ಯುವ ನಾಯಕರಿಗೆ ಮಣೆ ಹಾಕಬೇಕು ಎಂಬ ಬಲವಾದ ಒತ್ತಡ ಕಾರ್ಯಕರ್ತರ ವಲಯದಿಂದ ಕೇಳಿಬರುತ್ತಿದೆ. ಕರಾವಳಿ ಬಿಜೆಪಿಯ ಭದ್ರಕೋಟೆಯನ್ನು ಕಾಯ್ದುಕೊಳ್ಳಲು ಹೈಕಮಾಂಡ್ ಯುವ ಪೀಳಿಗೆಗೆ ಟಿಕೆಟ್ ನೀಡಬೇಕೆಂಬ ಚರ್ಚೆಗಳು ಈಗಿನಿಂದಲೇ ಶುರುವಾಗಿದ್ದು, ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಬಿಜೆಪಿ ರಾಜಕಾರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular