Friday, May 15, 2026
Flats for sale
Homeವಿದೇಶಬೀಜಿಂಗ್ : ತೈವಾನ್ ವಿಚಾರದಲ್ಲಿ ಮೂಗು ತೂರಿಸಬೇಡಿ : ಟ್ರಂಪ್‌ಗೆ ಚೀನಾ ಎಚ್ಚರಿಕೆ.

ಬೀಜಿಂಗ್ : ತೈವಾನ್ ವಿಚಾರದಲ್ಲಿ ಮೂಗು ತೂರಿಸಬೇಡಿ : ಟ್ರಂಪ್‌ಗೆ ಚೀನಾ ಎಚ್ಚರಿಕೆ.

ಬೀಜಿಂಗ್ : ತೈವಾನ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಅಮೆರಿಕ ಮೂಗು ತೂರಿಸಬಾರದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಬೀಜಿಂಗ್‌ನಲ್ಲಿ ಟ್ರಂಪ್ ಅವರನ್ನು ಸ್ವಾಗತಿಸಿದ ಜಿನ್‌ಪಿಂಗ್, ಚೀನಾ ಮತ್ತು ಅಮೆರಿಕ ಸಹಕಾರದಿಂದಲೇ ಜಾಗತಿಕ ಶಾಂತಿ ಹಾಗೂ ಸಮೃದ್ಧಿ ಸಾಧ್ಯ ಎಂದು ಹೇಳಿದ್ದಾರೆ. “ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧದಲ್ಲಿ ಕೋಟಿ ಕೋಟಿ ಜನರ ಹಿತ ಅಡಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಚೀನಾದ 10 ಪ್ರಮುಖ ಕಂಪನಿಗಳಿಗೆ ಎನ್‌ವಿಡಿಯಾದ ಅತ್ಯಾಧುನಿಕ ಎಚ್200 ಚಿಪ್ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಅಲಿಬಾಬಾ, ಟೆನ್ಸೆಂಟ್, ಬೈಟ್‌ಡಾನ್ಸ್ ಸೇರಿ ಹಲವು ಕಂಪನಿಗಳು ಇದರ ಪ್ರಯೋಜನ ಪಡೆಯಲಿವೆ.

ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವ ವಿಚಾರದಲ್ಲೂ ಟ್ರಂಪ್ ಮತ್ತು ಜಿನ್‌ಪಿಂಗ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ವೈಟ್‌ಹೌಸ್ ತಿಳಿಸಿದೆ.

ಟ್ರಂಪ್ ನಿಯೋಗದಲ್ಲಿ ಎಲಾನ್ ಮಸ್ಕ್, ಟಿಮ್ ಕುಕ್, ಜೆನ್ಸೆನ್ ಹುವಾಂಗ್ ಸೇರಿದಂತೆ ಜಾಗತಿಕ ಕಂಪನಿಗಳ ಪ್ರಮುಖರು ಭಾಗಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular