Monday, May 25, 2026
Flats for sale
Homeರಾಜಕೀಯಬೆಂಗಳೂರು : ದೀದಿ ಕೋಟೆಯನ್ನು ಛಿದ್ರ ಮಾಡಿದ ಬಿಜೆಪಿ, ತಮಿಳುನಾಡಿನಲ್ಲಿ ಬಿರುಗಾಳಿ ಸೃಷ್ಟಿಸಿದ ನಟ ವಿಜಯ್,ಅಸ್ಸಾಂ...

ಬೆಂಗಳೂರು : ದೀದಿ ಕೋಟೆಯನ್ನು ಛಿದ್ರ ಮಾಡಿದ ಬಿಜೆಪಿ, ತಮಿಳುನಾಡಿನಲ್ಲಿ ಬಿರುಗಾಳಿ ಸೃಷ್ಟಿಸಿದ ನಟ ವಿಜಯ್,ಅಸ್ಸಾಂ ,ಪುದುಚೇರಿ ಎನ್.ಡಿ.ಎ ತೆಕ್ಕೆಗೆ,ಕೇರಳದಲ್ಲಿ ತೃಪ್ತಿ ಪಟ್ಟ ಕಾಂಗ್ರೆಸ್.

ಬೆಂಗಳೂರು : ದೇಶದಾದ್ಯಂತ ಕುತೂಹಲ ಮೂಡಿಸಿದ್ದ 2026ರ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಹಲವು ರಾಜ್ಯಗಳಲ್ಲಿ ರಾಜಕೀಯ ಸಮೀಕರಣಗಳು ಸಂಪೂರ್ಣವಾಗಿ ಬದಲಾಗಿವೆ.

ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಸಾಧಿಸಿದ್ದರೆ ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಗೆಲುವು ಸಾಧಿಸಿದೆ. ಉಳಿದಂತೆ ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅದ್ವೀತಿಯ ಸಾಧನೆ ಮಾಡಿದೆ. ಇನ್ನು ಕೇರಳಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿದೆ.

ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಈ ಬಾರಿ ಘಟಾನುಘಟಿ ನಾಯಕರೇ ಸೋಲಿನ ರುಚಿ ಕಂಡಿದ್ದಾರೆ. ಈ ಬಾರಿಯೂ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರುತ್ತದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಈ ಭವಿಷ್ಯ ಸುಳ್ಳಾಗಿದೆ. ಡಿಕೆಎಂ 74 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಎಐಎಡಿಎಂಕೆ 53 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಟಿಎಂಕೆ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಪಶ್ಚಿಮ ಬಂಗಾಳ : ಮಮತಾ ಬಾನೆರ್ಜಿ ಅವರ ದೀರ್ಘಕಾಲದ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಒಟ್ಟು 293 ಕ್ಷೇತ್ರಗಳಲ್ಲಿ:

ಬಿಜೆಪಿ: 206 (ಸ್ಪಷ್ಟ ಬಹುಮತ)
ಟಿಎಂಸಿ: 81
ಕಾಂಗ್ರೆಸ್: 02
ಇತರೆ: 03

ತಮಿಳುನಾಡು: ವಿಜಯ್ ಅಲೆ
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಇತಿಹಾಸ ನಿರ್ಮಿಸಿದೆ.
M. K. ಸ್ಟಾಲಿನ್ ಅವರಿಗೆ ಭಾರೀ ಹಿನ್ನಡೆ:
ಒಟ್ಟು ಸ್ಥಾನಗಳು: 234
ಟಿವಿಕೆ: 107 (ಅತಿದೊಡ್ಡ ಪಕ್ಷ)
ಡಿಎಂಕೆ: 60
ಎಐಎಡಿಎಂಕೆ: 47
ಕಾಂಗ್ರೆಸ್: 05

ಕೇರಳ: ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಜಯ

ಪಿಣರಾಯಿ ವಿಜಯಂ ನೇತೃತ್ವದ ಎಲ್‌ಡಿಎಫ್ ಸೋಲು ಅನುಭವಿಸಿದೆ.

ಒಟ್ಟು ಸ್ಥಾನಗಳು: 140
ಯುಡಿಎಫ್: 102 (ಸ್ಪಷ್ಟ ಬಹುಮತ)
ಎಲ್‌ಡಿಎಫ್: 35
ಎನ್‌ಡಿಎ: 03

ಅಸ್ಸಾಂ: ಬಿಜೆಪಿಗೆ ಹ್ಯಾಟ್ರಿಕ್

ಹಿಮಂತ ಬಿಸ್ವ ಶರ್ಮ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದೆ.

ಒಟ್ಟು ಸ್ಥಾನಗಳು: 126
ಬಿಜೆಪಿ: 82
ಕಾಂಗ್ರೆಸ್: 19
ಇತರೆ: 22

ಪುದುಚೇರಿ: ಎನ್‌ಡಿಎಗೆ ಮತ್ತೆ ಅಧಿಕಾರ
ಒಟ್ಟು ಸ್ಥಾನಗಳು: 30
ಎನ್‌ಡಿಎ: 16
ಡಿಎಂಕೆ: 05
ಕಾಂಗ್ರೆಸ್: 03
ಟಿವಿಕೆ: 02

ಒಟ್ಟಿನಲ್ಲಿ, ಈ ಚುನಾವಣಾ ಫಲಿತಾಂಶಗಳು ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸುವ ಸೂಚನೆ ನೀಡಿದ್ದು, ಕೆಲವು ರಾಜ್ಯಗಳಲ್ಲಿ ಹೊಸ ನಾಯಕತ್ವ ಉದಯವಾಗಿರುವುದು ಗಮನಾರ್ಹವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular