Sunday, May 3, 2026
Flats for sale
Homeವಿದೇಶಚೆನ್ನೈ : ಏರ್ ಅರೇಬಿಯಾ ವಿಮಾನದಲ್ಲಿ ಆತಂಕ : ಲ್ಯಾಂಡ್ ಆಗುವ ಮುನ್ನ ತುರ್ತು ಬಾಗಿಲು...

ಚೆನ್ನೈ : ಏರ್ ಅರೇಬಿಯಾ ವಿಮಾನದಲ್ಲಿ ಆತಂಕ : ಲ್ಯಾಂಡ್ ಆಗುವ ಮುನ್ನ ತುರ್ತು ಬಾಗಿಲು ತೆರೆದ ಪ್ರಯಾಣಿಕನ ಬಂಧನ.

ಚೆನ್ನೈ : ಏರ್ ಅರೇಬಿಯಾ ವಿಮಾನದಲ್ಲಿ ಲ್ಯಾಂಡ್ ಆಗುವ ಮುನ್ನವೇ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ಬಾಗಿಲು ತೆರೆದ ಘಟನೆ ಸಂಭವಿಸಿ ಭಾರೀ ಆತಂಕ ಉಂಟಾಗಿದೆ.

ಶಾರ್ಜಾದಿಂದ ಚೆನ್ನೈ ಗೆ ಬರುತ್ತಿದ್ದ ವಿಮಾನದಲ್ಲಿ 34 ವರ್ಷದ ಪ್ರಯಾಣಿಕನೊಬ್ಬ ಈ ಕೃತ್ಯ ಎಸಗಿದ್ದಾನೆ. ಘಟನೆ ವೇಳೆ ವಿಮಾನದಲ್ಲಿ ಸುಮಾರು 231 ಪ್ರಯಾಣಿಕರು ಇದ್ದರು. ವಿಮಾನ ರನ್‌ವೇಗೆ ಇಳಿಯಲು ಸಿದ್ಧವಾಗುತ್ತಿದ್ದ ಕ್ಷಣದಲ್ಲಿ, ಪ್ರಯಾಣಿಕನು ಅಚಾನಕ್ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಇದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಪೈಲಟ್ ತಕ್ಷಣವೇ ಎಚ್ಚರಿಕೆ ಕ್ರಮ ಕೈಗೊಂಡು ವಿಮಾನವನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾರೆ.ಬಳಿಕ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪೈಲಟ್‌ನ ಸಂದೇಶದ ಮೇರೆಗೆ CISF ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಬಾಗಿಲು ತೆರೆದ ಪ್ರಯಾಣಿಕನನ್ನು ತಕ್ಷಣ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಆತ ತೆರೆದಪುದುಕ್ಕೊಟ್ಟೈ ನಿವಾಸಿ ಎಂದು ಗುರುತಿಸಲಾಗಿದೆ.ಈ ಕೃತ್ಯ ದುರುದ್ದೇಶದಿಂದ ಮಾಡಿದ್ದನೋ ಅಥವಾ ಅಜಾಗರೂಕತೆಯಿಂದ ಮಾಡಿದನೆಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇಂತಹ ಅಪಾಯಕಾರಿ ವರ್ತನೆಗಳು ಹೆಚ್ಚುತ್ತಿರುವ ಹಿನ್ನೆಲೆ, ಈ ಘಟನೆಗೂ ಅದೇ ಕಾರಣವೋ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular