Sunday, May 3, 2026
Flats for sale
Homeರಾಜ್ಯಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಬೆಸ್ಕಾಂ ಜಾಗೃತ ದಳದ  ಎಸ್‌.ಪಿ ಲಾವಣ್ಯ ನಿಧನ.

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಬೆಸ್ಕಾಂ ಜಾಗೃತ ದಳದ  ಎಸ್‌.ಪಿ ಲಾವಣ್ಯ ನಿಧನ.

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಬೆಸ್ಕಾಂ ಜಾಗೃತ ದಳದ ಎಸ್‌ಪಿ ಲಾವಣ್ಯ ನಾರಾಯಣಪ್ಪ (39) ಅವರು ಶನಿವಾರ ನಿಧನರಾದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಲಾವಣ್ಯ ಅವರು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದವರಾದ ಲಾವಣ್ಯ ಅವರು 2010ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿಯಾಗಿದ್ದರು. ಮಂಡ್ಯ ಮತ್ತು ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಸೇವೆಸಲ್ಲಿಸಿದ್ದು ಬೆಂಗಳೂರಿನಲ್ಲಿ ಇಂಟಲಿಜೆನ್ಸ್ ವಿಭಾಗ ಹಾಗೂ ಡಿಸಿಆರ್‌ಇ ಎಸ್‌ಪಿಯಾಗಿ 2023ರಿಂದ ಬೆಸ್ಕಾಂ ಜಾಗೃತ ದಳದ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಲಾವಣ್ಯ ಅವರು ಪತಿ, 10 ವರ್ಷದ ಪುತ್ರ ಹಾಗೂ 3 ವರ್ಷದ ಪುತ್ರಿಯನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ರಾಜ್ಯ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular