ಮುಂಬೈ : ನಾಸಿಕ್‌ನ ಟಿಸಿಎಸ್‌ನಲ್ಲಿ ನಡೆದಿದೆ ಎನ್ನಲಾದ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಈ ಪ್ರಕರಣದ ಪ್ರಮುಖ ಆರೋಪಿ ಎಚ್‌ಆರ್ ನಿದಾ ಖಾನ್ ಸಂತ್ರಸ್ತ ಹಿಂದೂ ಯುವತಿಯರನ್ನು ಇಸ್ಲಾಂಗೆ ಮತಾಂತರಿಸಲು ವ್ಯವಸ್ಥಿತ ಸಂಚು ರೂಪಿಸಿದ್ದಳು ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಬಗ್ಗೆ ತನಿಖೆಯಲ್ಲಿ ಕೆಲವು ಮಹತ್ವದ ಅಮಾಶಗಳು ಹೊರಬಂದಿದೆ. ಸಂತ್ರಸ್ತೆಯ ಹೆಸರನ್ನು ‘ಹನಿಯಾ’ ಎಂದು ಬದಲಿಸಲು ಸಂಚು ರೂಪಿಸಲಾಗಿತ್ತು ಆಕೆಯ ಶೈಕ್ಷಣಿಕ ದಾಖಲೆಗಳನ್ನು ಮತ್ತೊಬ್ಬ ಆರೋಪಿ ದಾನೀಶ್ ಶೇಖ್ ವಶಕ್ಕೆ ಪಡೆದಿದ್ದಾನೆ ಎನ್ನಲಾಗಿದೆ ನಿದಾ ಖಾನ್ ಸಂತ್ರಸ್ತರಿಗೆ ಬುರ್ಖಾ ಮತ್ತು ಹಿಜಾಬ್ ಧರಿಸುವುದನ್ನು ಕಲಿಸುತ್ತಿದ್ದಳು ಮನೆಗೆ ಕರೆದುಕೊಂಡು ಹೋಗಿ ನಮಾಜ್ ಹಾಗೂ ರೋಜಾ ಆಚರಣೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು.ಹಾಗೂ ಸಂತ್ರಸ್ತೆಯನ್ನು ಮಲೇಷ್ಯಾಕ್ಕೆ ಕಳುಹಿಸಿ ಅಲ್ಲಿ ಉದ್ಯೋಗ ನೀಡುವ ಆಮಿಷವನ್ನೂ ಒಡ್ಡಲಾಗಿತ್ತು. ಇದರಿಂದ ದೇಶದ ಹೊರಗಿನ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಸಂತ್ರಸ್ತೆಯ ಮೊಬೈಲ್‌ನಲ್ಲಿ ಧಾರ್ಮಿಕ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲಾಗಿದೆ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಮೂಲಕ ಧಾರ್ಮಿಕ ಸಂದೇಶಗಳನ್ನು ಕಳುಹಿಸಿ ಮನಪರಿವರ್ತನೆಗೆ ಯತ್ನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದ್ದು, ಅವರನ್ನು ಟಿಸಿಎಸ್ ಕಂಪನಿಯಿಂದ ಅಮಾನತು ಮಾಡಲಾಗಿದೆ. ಪ್ರಮುಖ ಆರೋಪಿ ನಿದಾ ಖಾನ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನಾಸಿಕ್ ನ್ಯಾಯಾಲಯವು ನಿದಾ ಖಾನ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗೆ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದೆ. ಬಲವಂತದ ಮತಾಂತರ ಪ್ರಕರಣದಲ್ಲಿ ಸಂಘಟಿತ ಜಾಲದ ಸುಳಿವು ಸಿಕ್ಕಿದ್ದು, ಪೊಲೀಸರು ವ್ಯಾಪಕ ತನಿಖೆ ಮುಂದುವರಿಸಿದ್ದಾರೆ.


