Monday, August 17, 2026
Homeವಿದೇಶಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ 2 ನೇ ಸಂಧಾನ ಸಭೆಯೂ ವಿಫಲ,ಮಾತುಕತೆಯಲ್ಲಿ ಆಸಕ್ತಿ ತೋರದ ಇರಾನ್.

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ 2 ನೇ ಸಂಧಾನ ಸಭೆಯೂ ವಿಫಲ,ಮಾತುಕತೆಯಲ್ಲಿ ಆಸಕ್ತಿ ತೋರದ ಇರಾನ್.

ಇಸ್ಲಾಮಾಬಾದ್ : ಅಮೆರಿಕ-ಇರಾನ್ ನಡುವಣ ಎರಡು ವಾರಗಳ ಕದನವಿರಾಮ ಬುಧವಾರ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಪಾಕಿಸ್ತಾನದ ಇಸ್ಲಾಮಾಬಾದ್ ನಗರದಲ್ಲಿ ಎರಡನೇ ಸುತ್ತಿನ ಶಾಂತಿಮಾತುಕತೆಗೆ ತಯಾರಿ ನಡೆದಿದ್ದರೂ ಇರಾನ್ ಅದರಲ್ಲಿ ಭಾಗಿಯಾಗದೇ ಮಾತುಕತೆಯಿಂದ ದೂರ ಉಳಿಯಿತು. ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗವು ಇಸ್ಲಾಮಾಬಾದ್‌ಗೆ ತಲುಪಿದರೂ ಇರಾನ್ ಈ ಮಾತುಕತೆಯಲ್ಲಿ ಆಸಕ್ತಿ ತೋರಿಸಿಲ್ಲ. ಇರಾನ್ ಬಂದರು ಕಡೆ ತೆರಳುತ್ತಿದ್ದ ಸರಕು ಹಡಗನ್ನು ಅಮೆರಿಕ ವಶಪಡಿಸಿಕೊಂಡಿರುವುದು ೨ನೇ ಸುತ್ತಿನ ಮಾತುಕತೆಗೆ ತೊಡಕಾಗಿದೆ.

ಇರಾನ್‌ನ ಟೌಸ್ಕಾ ಹಡಗು ಅಮೆರಿಕದ ದಿಗ್ಬಂಧನ ಉಲ್ಲಂಘಿಸಿದ ಕಾರಣ ಅದನ್ನು ನಿಲ್ಲಿಸುವಂತೆ ಸೂಚಿಸಿದರೂ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸದ ಕಾರಣ ಆರು ಗಂಟೆಗಳ ಬಳಿಕ ಅದರ ಇಂಜಿನ್ ರೂಮಿನ ಮೇಲೆ ಗುಂಡು ಹಾರಿಸಿ ನಿಷ್ಕಿçಯಗೊಳಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಪಡೆಗಳು ಅಮೆರಿಕದ ನೌಕೆಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಅಮೆರಿಕ ಪಡೆಗಳು ಇರಾನ್ ಹಡಗಿನ ಮೇಲೆ ದಾಳಿ ಮಾಡಿರುವುದು ಕದನವಿರಾಮ ಉಲ್ಲಂಘನೆ ಎAದು ಕಾರಣವೊಡ್ಡಿ ಇರಾನ್ ಮಾತುಕತೆಯಿಂದ ದೂರ ಇರುವುದನ್ನು ದೃಢಪಡಿಸಿತು.

ಎರಡು ದೇಶಗಳ ಮಧ್ಯೆ ವಿಶ್ವಾಸ ಕೊರತೆ ಇರುವುದರಿಂದ ಶಾಂತಿ ಮಾತುಕತೆ ಮುಂದು ವರಿದಿರುವುದು ಇಲ್ಲಿ ಉಲ್ಲೇಖನೀಯ ಅಮೆರಿಕ ಈ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವು ದಾಗಿಯೂ ಹೇಳಿ ದರೂ ರಾಜತಾಂತ್ರಿಕ ಪ್ರಕ್ರಿಯೆ ಅನುಸರಿಸುವಲ್ಲಿ ಗಾಂಭೀರ್ಯ ತೋರಿಸುತ್ತಿಲ್ಲ ಎಂಬುದು ಇರಾನ್ ಆರೋಪ.

ಮಾತುಕತೆಗೆ ಅವಕಾಶ ಮಾಡಿಕೊಟ್ಟಿರುವ ಕದನವಿರಾಮದ ಅವಧಿ ಬುಧವಾರ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲು ನಡೆಸಲು ಉದ್ದೇಶಿಸಿದ್ದ ಸಂಧಾನಕ್ಕೆ ಇರಾನ್ ಸಂಪೂರ್ಣ ತಿರಸ್ಕಾರ ತೋರಿಸಿದೆ. ಇರಾನ್ ಹಡಗನ್ನು ವಶಪಡಿಸಿಕೊಂಡು ಕದನವಿರಾಮ ಉಲ್ಲಂಘನೆ ಮಾಡಿದ್ದರಿಂದ ಸಂಧಾನದಲ್ಲಿ ಭಾಗವಹಿಸಿಲ್ಲ ಎನ್ನುವ ಕಾರಣವನ್ನು ಇರಾನ್ ನೀಡಿದೆ. ಆದರೆ ಕದನವಿರಾಮ ಮುಗಿಯುತ್ತಿದ್ದಂತೆ ಮತ್ತೆ ಶುರುವಾಗಲಿದೆಯಾ ಯುದ್ಧ ಎನ್ನುವ ಆತಂಕಕ್ಕೆ ಈ ಬೆಳವಣಿಗೆ ಕಾರಣವಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಜತೆ ಫೋನ್‌ನಲ್ಲಿ ಮಾತನಾಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್, ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನವು ಶಾಂತಿ ಮಾತುಕತೆಗೆ ದೊಡ್ಡ ಅಡ್ಡಿಯಾಗಿದೆ. ಜಲಸಂಧಿಯನ್ನು ಒಪನ್ ಮಾಡಿದ್ರೆ ಇರಾನ್ ಮಾತುಕತೆಗೆ ಬರಬಹುದು ಎಂದು ಹೇಳಿದ್ದಾರೆ. ಮುನೀರ್ ಸಲಹೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಟ್ರಂಪ್, ನಿಮ್ಮ ಸಲಹೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿ ಮಾತುಕತೆಗೆ ಟ್ರಂಪ್ ದಾರಿ ಮಾಡಿಕೊಡುತ್ತಾರಾ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular