Tuesday, April 7, 2026
Flats for sale
Homeಜಿಲ್ಲೆಮಂಗಳೂರು : 2025-26 ಆರ್ಥಿಕ ವರ್ಷದಲ್ಲಿ MCC ಬ್ಯಾಂಕ್‌ ಭರ್ಜರಿ ಸಾಧನೆ: ರೂ.13 ಕೋಟಿ ಲಾಭ,...

ಮಂಗಳೂರು : 2025-26 ಆರ್ಥಿಕ ವರ್ಷದಲ್ಲಿ MCC ಬ್ಯಾಂಕ್‌ ಭರ್ಜರಿ ಸಾಧನೆ: ರೂ.13 ಕೋಟಿ ಲಾಭ, 25 ಶಾಖೆಗಳ ಗುರಿ : ಅಧ್ಯಕ್ಷ ಅನಿಲ್ ಲೋಬೊ.

ಮಂಗಳೂರು : MCC ಬ್ಯಾಂಕ್ 2025-26 ಆರ್ಥಿಕ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ರೂ.13 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿದೆ. 114ನೇ ವರ್ಷದ ಸೇವೆಯತ್ತ ಸಾಗುತ್ತಿರುವ ಬ್ಯಾಂಕ್, ಎಲ್ಲಾ ಆರ್ಥಿಕ ಮಾನದಂಡಗಳಲ್ಲಿ ಉತ್ತಮ ಬೆಳವಣಿಗೆ ತೋರಿದೆ ಎಂದು MCC ಬ್ಯಾಂಕ್‌ ನ ಅಧ್ಯಕ್ಷ ಅನಿಲ್ ಲೋಬೊರವರು ತಿಳಿಸಿದ್ದಾರೆ.

ಬ್ಯಾಂಕಿನ ಒಟ್ಟು ವ್ಯವಹಾರ ರೂ.1525 ಕೋಟಿಗೆ ತಲುಪಿದ್ದು, 23% ವೃದ್ಧಿ ಕಂಡಿದೆ. ಠೇವಣಿಗಳು ರೂ.872.88 ಕೋಟಿಗೆ ಏರಿಕೆಯಾಗಿ 23.74% ಬೆಳವಣಿಗೆ ಕಂಡಿದ್ದು, ಸಾಲ ವಿತರಣೆ ರೂ.652.06 ಕೋಟಿಗೆ ತಲುಪಿದ್ದು 21.79% ಏರಿಕೆಯಾಗಿದೆ. ಬ್ಯಾಂಕಿನ ನೆಟ್ NPA ಅನ್ನು 1.25% ಮಟ್ಟಕ್ಕೆ ಇಳಿಸಲು ಯಶಸ್ವಿಯಾಗಿದ್ದು, CRAR ಪ್ರಮಾಣ 17% ಆಗಿದೆ. 2018ರಲ್ಲಿ ರೂ.500 ಕೋಟಿ ಇದ್ದ ಒಟ್ಟು ವ್ಯವಹಾರವು ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಾಗಿ ದಾಖಲೆಯಾಗಿದೆ. ಬ್ಯಾಂಕಿನ ನೆಟ್‌ವರ್ಥ್ ರೂ.91.80 ಕೋಟಿಗೆ ಏರಿಕೆಯಾಗಿದೆ.

ಶಾಖೆ ವಿಸ್ತರಣೆ
ಈಗಾಗಲೇ ಬೈಂದೂರು (20ನೇ) ಮತ್ತು ಸಂತೆಕಟ್ಟೆ (21ನೇ) ಶಾಖೆಗಳನ್ನು ಆರಂಭಿಸಿರುವ ಬ್ಯಾಂಕ್, ಜೂನ್ ಅಂತ್ಯದೊಳಗೆ ದೇರಳಕಟ್ಟೆಯಲ್ಲಿ 22ನೇ ಶಾಖೆ ಆಗಸ್ಟ್ ಮೊದಲ ವಾರದಲ್ಲಿ ಕಟಪಾಡಿಯಲ್ಲಿ 23ನೇ ಶಾಖೆ ಮಾರ್ಚ್ ಒಳಗೆ ವಾಮಂಜೂರಿನಲ್ಲಿ 24ನೇ ಶಾಖೆ ಮಂಗಳೂರಿನಲ್ಲಿ 25ನೇ “ಸಿಲ್ವರ್ ಶಾಖೆ” ಆರಂಭಿಸಲು ಯೋಜನೆ ರೂಪಿಸಿದೆ. ಮುಂದಿನ ವರ್ಷಾಂತ್ಯಕ್ಕೆ ಶಾಖೆಗಳ ಸಂಖ್ಯೆ 25ಕ್ಕೆ ಏರಲಿದೆ.

ಸೌಲಭ್ಯಗಳು
ಬ್ಯಾಂಕ್ 7 ಹೊಸ ATMಗಳನ್ನು ಸ್ಥಾಪಿಸಿದ್ದು, ಒಟ್ಟು ATMಗಳ ಸಂಖ್ಯೆ 15ಕ್ಕೆ ಏರಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದು, ಮೊಬೈಲ್ ಬ್ಯಾಂಕಿಂಗ್ ಹಾಗೂ ATM ಸೇವೆಗಳು ಉಚಿತವಾಗಿ ಲಭ್ಯವಿವೆ. ಸೇವೆಗಳು ಬ್ಯಾಂಕ್ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, MSME ಸಾಲ ಸೇರಿದಂತೆ ವಿವಿಧ ಹಣಕಾಸು ಉತ್ಪನ್ನಗಳನ್ನು ಒದಗಿಸುತ್ತಿದೆ. ಕಡಿಮೆ ದರದಲ್ಲಿ ಲಾಕರ್ ಸೌಲಭ್ಯವೂ ಲಭ್ಯವಿದೆ.

ಭದ್ರತೆ
ಬ್ಯಾಂಕಿನ ಠೇವಣಿಗಳು RBI ಮಾರ್ಗಸೂಚಿಯಂತೆ DICGC ಮೂಲಕ ವಿಮೆಗೊಳಿಸಲ್ಪಟ್ಟಿವೆ.ಬ್ಯಾಂಕಿನಲ್ಲಿನ ಠೇವಣಿಗಳು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳಂತೆ ಡಿಪಾಸಿಟ್ ಇನ್ಸುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇರ್ಷನ್ (DICGC) ಮೂಲಕ ವಿಮೆಗೊಳಿಸಲಾಗಿದೆ. ಈ ಸಾಧನೆಗೆ ಸದಸ್ಯರು ಮತ್ತು ಗ್ರಾಹಕರ ವಿಶ್ವಾಸ, ಸಿಬ್ಬಂದಿಯ ಸಮರ್ಪಿತ ಸೇವೆಯೇ ಪ್ರಮುಖ ಕಾರಣವಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿಯೂ ಇದೇ ರೀತಿಯ ಬೆಂಬಲದೊಂದಿಗೆ ಇನ್ನಷ್ಟು ಸಾಧನೆಗಳನ್ನು ಮಾಡುವತ್ತ ಬ್ಯಾಂಕ್ ನಿರೀಕ್ಷೆ ಹೊಂದಿದೆ.

ಮುಂದಿನ ದಿನಗಳಲ್ಲಿ ಜೂನ್ ಅಂತ್ಯದೊಳಗೆ ದೇರಳಕಟ್ಟೆ (ದಕ್ಷಿಣ ಕನ್ನಡ ಜಿಲ್ಲೆ) ಯಲ್ಲಿ 22ನೇ ಶಾಖೆ ಆರಂಭವಾಗಲಿದೆ.ಮಂಗಳೂರು (ಮೋರ್ಗನ್‌ಗೇಟ್) ಶಾಖೆಯನ್ನು ಜುಲೈ ಅಂತ್ಯದೊಳಗೆ ಸ್ಥಳಾಂತರಗೊಳ್ಳಲಿದೆ. ಕಾರ್ಕಳ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಆಗಸ್ಟ್ ಮೊದಲ ವಾರದಲ್ಲಿ ಕಟಪಾಡಿ (ಉಡುಪಿ ಜಿಲ್ಲೆ ) ಯಲ್ಲಿ 23ನೇ ಶಾಖೆ ಆರಂಭವಾಗಲಿದೆ.ಮಾರ್ಚ್ ಅಂತ್ಯದೊಳಗೆ ವಾಮಂಜೂರಿನಲ್ಲಿ 24ನೇ ಶಾಖೆ ಆರಂಭವಾಗಲಿದೆ. ಮೂಡಬಿದ್ರೆ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ನೆಲ ಮಹಡಿಗೆ ಸ್ಥಳಾಂತರಗೊಳ್ಳಲಿದೆ. .3 ನಗದು ಠೇವಣಿ ಮತ್ತು ವಿತರಣೆ (Cash Deposit and Dispenser) ಎಟಿಎಂ ಯಂತ್ರಗಳ ಸ್ಥಾಪನೆಗೊಳ್ಳಲಿದೆ.
ಮಾರ್ಚ್ ಅಂತ್ಯದೊಳಗೆ ಮಂಗಳೂರಿನಲ್ಲಿ ಸಿಲ್ವರ್ ಶಾಖೆ (25ನೇ ಶಾಖೆ) ಆರಂಭವಾಗಿಲಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜೆರಾಲ್ಡ್ ಜೂಡ್ ಡಿಸಿಲ್ವ – ಉಪಾಧ್ಯಕ್ಷರು, ನಿರ್ದೇಶಕರಾದ – ಆಂಡೂ ಡಿಸೋಜಾ, ಡಾ| ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಎಲ್ಲೋಯ್ ಕಿರಣ್ ಕ್ರಾಸ್ಕೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಮಾನ್ಯಾ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜಾ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂದಕರು – ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular