ನವದೆಹಲಿ : ಏಪ್ರಿಲ್ ಒಂದರಿಂದ ಮಹಾನಗರಗಳಲ್ಲಿ ರಸ್ತೆ, ಪುಟ್ಪಾತ್ ಇಲ್ಲವೇ ಪಾರ್ಕ್ ಗಳಲ್ಲಿ ಸಾಕು ನಾಯಿಗಳಾಗಲಿ ಅಥವಾ ಮನುಷ್ಯರು ಮಲ
ಮೂತ್ರ ವಿಸರ್ಜನೆ ಮಾಡಿದ್ದಲ್ಲಿ ದಂಡ ತೆರುವುದು ನಿಶ್ಚಿತ. ಈ ಕುರಿತ ಜನವಿಶ್ವಾಸ್ ಮಸೂದೆಗೆ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಈ ರೀತಿಯ ದುರ್ವರ್ತನೆ ತೋರಿದಲ್ಲಿ ಪ್ರಸ್ತಾವಿತ ಜನ ವಿಶ್ವಾಸ ಕಾನೂನಿನಡಿ 50೦ರಿಂದ ಸಾವಿರ ರೂ.ವರೆಗೂ ದಂಡ ಕಟ್ಟಬೇಕಾಗುತ್ತದೆ.
ಸಾರ್ವಜನಿಕರು ಓಡಾಡುವಲ್ಲಿ ಸ್ವಚ್ಛತೆ, ಸಾಕು ಪ್ರಾಣಿಗಳ ನಿರ್ವಹಣೆ ಹಾಗೂ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಕಟ್ಟುನಿಟ್ಟಿನ ನಿಬಂಧನೆಗಳನ್ನು ಜಾರಿಗೆ ತರಲಾಗುತ್ತದೆ. ಸಾಕು ಪ್ರಾಣಿಗಳು ಮಾಡಿದ ಮಲ ಮೂತ್ರಗಳನ್ನು ಸ್ವಚ್ಚ ಮಾಡದಿದ್ದಲ್ಲಿ 500 ರಿಂದ ಸಾವಿರ ರೂ.ವರೆಗೆ ಪಾವತಿಸಬೇಕಾಗುತ್ತದೆ. ನಾಯಿಗಳ ಪಾಲಕರುಗಳು ಅವುಗಳ ಮಲಮೂತ್ರ ಸ್ವಚ್ಛಗೊಳಿಸುವುದಕ್ಕೆ ಬೆಂಗಳೂರು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ನಾಯಿಗಳು ಕಾರು ಅಥವಾ ಅದರ ಟಯರುಗಳು ಇಲ್ಲವೇ ನಿರ್ಬಂಧಿತ ವಲಯಗಳಲ್ಲಿ ಮಲಮೂತ್ರ ಮಾಡಿದ್ದಲ್ಲಿ ವಸತಿ ಸಮುಚ್ಚಯದ ಕಲ್ಯಾಣ ಸಂಘದವರು ೫೦೦ರಿAದ ಸಾವಿರ ರೂ.ವರೆಗೆ ದಂಡ ವಿಧಿಸಬಹುದು.
ಇದೇ ವೇಳೆ ಮನುಷ್ಯರು ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ಮಾಡಿದರೆ ಮೊದಲ ಬಾರಿ ೫೦೦ ರೂ. ದಂಡ ವಿಧಿಸಲಾಗುತ್ತದೆ. ಒಂದಕ್ಕಿAತ ಹೆಚ್ಚು ಬಾರಿ ಅದೇ ಚಾಳಿ ಮುಂದುವರಿಸಿದರೆ ದಂಡದ ಪ್ರಮಾಣವನ್ನೂ ಹೆಚ್ಚಿಸಲಾಗುತ್ತದೆ. ಸಾರ್ವಜನಿಕ ಸ್ವಾಸ್ಥ್ಯ ಕಾಪಾಡುವ ಕಾನೂನುಗಳ ಜಾರಿ ವಿಚಾರದಲ್ಲಿ ನಗರಪಾಲಿಕೆಗಳೇ ಗಮನಹರಿಸಬೇಕಾಗುತ್ತದೆ.
ನಾಯಿ ಪಾಲಕರ ಹೊಣೆಯೇನು?:
ನಾಯಿಗಳು ಮೂತ್ರ ಮಾಡಿದ್ದಲ್ಲಿ ಅದನ್ನು ಸ್ವಚ್ಚ ಮಾಡಲು ಸಣ್ಣ ಬಾಟಲಿಗಳಲ್ಲಿ ನೀರು ಒಯ್ಯಬೇಕಾಗುತ್ತದೆ. ಹಾಗೆಯೇ ಮಲ ಮಾಡಿದರೆ ಅದನ್ನು ತುಂಬಲು ಬ್ಯಾಗ್ ಹೊತ್ತೊಯ್ಯಬೇಕು. ಮನುಷ್ಯರ ಅಥವಾ ಪ್ರಾಣಿಗಳ ಮಲ ಮೂತ್ರ ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವುದನ್ನು ತಡೆಯುವುದು ಹೊಸ ಕಾನೂನಿನ ಆದ್ಯತೆಯಾಗಿದೆ. ನಗರಪಾಲಿಕೆ ಕಾಯ್ದೆಯಡಿ ಇಂತಹ ಕೃತ್ಯಗಳು ದಂಡನಾರ್ಹವಾಗಿವೆ


