Thursday, March 26, 2026
Flats for sale
Homeಜಿಲ್ಲೆಮಂಗಳೂರು : ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿಗೆ ವಿದುಷಿ ಸುಮಂಗಲಾ ರತ್ನಾಕರ ರಾವ್, ರೊಟೇರಿಯನ್ ಸತೀಶ್...

ಮಂಗಳೂರು : ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿಗೆ ವಿದುಷಿ ಸುಮಂಗಲಾ ರತ್ನಾಕರ ರಾವ್, ರೊಟೇರಿಯನ್ ಸತೀಶ್ ಬೋಳಾರ್ ಮತ್ತು ರಂಗಸಂಘಟಕ ಕರುಣಾಕರ ಶೆಟ್ಟಿ ಆಯ್ಕೆ.

ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಮಲಬಾರ್ ಗೋಲ್ಡ್ ಮಂಗಳೂರು ಶಾಖೆಯ ಜಂಟಿ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ನಡೆಯುವ ಕಾರ್ಯಕ್ರಮ ಇದೇ ಮಾರ್ಚ್ 27 ಕ್ಕೆ ಸಂಜೆ 5.00 ಗಂಟೆಗೆ ಮಂಗಳೂರಿನ ಮಲಬಾರ್ ಗೋಲ್ಡ್ ಮಳಿಗೆಯಲ್ಲಿ ಜರಗಲಿದೆ. 2026 ನೆ ಸಾಲಿನ ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಸಮ್ಮಾನಪತ್ರ, ಬೆಳ್ಳಿಯ ನಾಣ್ಯಗಳನ್ನು ಒಳಗೊಂಡಿದೆ.

ಭರತನಾಟ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಗುರು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ರವರನ್ನು ಕಲಾಕ್ಷೇತ್ರದಲ್ಲಿ ವಿಶ್ವರಂಗಭೂಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರೋಟರಿ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ಕಲಾ ಪೋಷಕರಾಗಿರುವ ಉದ್ಯಮಿ ಶ್ರೀ ಸತೀಶ್ ಬೋಳಾರ್ ಇವರನ್ನು ಕಲಾಸೇವೆ ಕ್ಷೇತ್ರದಲ್ಲಿ ಮತ್ತು ರಂಗಸಂಘಟಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಕರುಣಾಕರ ಶೆಟ್ಟಿಯವರನ್ನು ಸಂಘಟನಾ ಕ್ಷೇತ್ರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕರಾದ ಶಶಿರಾಜ್ ರಾವ್ ಕಾವೂರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular