Tuesday, March 24, 2026
Flats for sale
Homeಜಿಲ್ಲೆಮಂಗಳೂರು ; AI ತಂತ್ರಜ್ಞಾನದ ಸಹಾಯದಿಂದ ವಿಡಿಯೋ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಪ್ರಚೋದನೆ...

ಮಂಗಳೂರು ; AI ತಂತ್ರಜ್ಞಾನದ ಸಹಾಯದಿಂದ ವಿಡಿಯೋ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಪ್ರಚೋದನೆ : ಆರೋಪಿಯ ಬಂಧನ.

ಮಂಗಳೂರು ; ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಪ್ರಚೋದಿಸುವ ಉದ್ದೇಶದಿಂದ ತಿರುಚಿದ ವಿಡಿಯೋ ಹಂಚಿದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

2025ರ ಅಕ್ಟೋಬರ್ ತಿಂಗಳಲ್ಲಿ “ನಝೀರ ಮಂಗಳೂರು” ಎಂಬ ಫೇಸ್‌ಬುಕ್ ಖಾತೆಯಿಂದ AI ತಂತ್ರಜ್ಞಾನದ ಸಹಾಯದಿಂದ ತಿರುಚಿದ ವಿಡಿಯೋವನ್ನು ಶೇರ್ ಮಾಡಲಾಗಿತ್ತು. ಈ ವಿಡಿಯೋ ಮೂಲಕ ಸಮಾಜದಲ್ಲಿ ಕೋಮು ದ್ವೇಷ ಹುಟ್ಟುಹಾಕಲು ಪ್ರಚೋದನೆ ನೀಡಲಾಗಿದೆ ಎಂಬ ಆರೋಪದ ಮೇಲೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 196, 353(1), 351(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ತನಿಖೆ ವೇಳೆ “ನಝೀರ ಮಂಗಳೂರು” ಖಾತೆಯನ್ನು ಬಳಸುತ್ತಿದ್ದ ವ್ಯಕ್ತಿ ಮಹಮ್ಮದ್ ರಫೀಕ್ (38) ಎಂದು ಗುರುತಿಸಲಾಗಿದೆ. ಆತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.ಆರೋಪಿಯನ್ನು ಮಾರ್ಚ್ 22, 2026ರಂದು ಬೆಂಗಳೂರುನಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಮತ್ತು ದ್ವೇಷ ಪ್ರಚೋದನೆ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular