Friday, March 20, 2026
Flats for sale
Homeರಾಜ್ಯಬೆಂಗಳೂರು : ರೀಲ್ಸ್ ಮಾಡುವ ಚಟಕ್ಕೆ ಬಿದ್ದು ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೊರಿಯರ್ ಮಾಡಿದ...

ಬೆಂಗಳೂರು : ರೀಲ್ಸ್ ಮಾಡುವ ಚಟಕ್ಕೆ ಬಿದ್ದು ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೊರಿಯರ್ ಮಾಡಿದ ಕುಟುಂಬ.

ಬೆಂಗಳೂರು : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಜನರಿಗೆ ಬುದ್ಧಿ ಹೇಳುವವರ ಸಂಖ್ಯೆ ದೊಡ್ಡದಾಗಿದ್ದು, ಏನೋ ಮಾಡಲು ಹೋಗಿ ಇನ್ನೆನೋ ಆಗಿ ಪೇಚಿಗೆ ಸಿಲುಕುವ ಘಟನೆ ಗಳೂ ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇಂತಹುದ್ದೇ ಒಂದು ಪ್ರಸಂಗ ಬೆಂಗಳೂರಲ್ಲಿಯೂ ನಡೆದಿದೆ. ರೀಲ್ಸ್ ಮಾಡುವ ಚಟಕ್ಕೆ ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೂರಿಯರ್ ಮಾಡಲು ಕುಟುಂಬವೊಂದು ಯತ್ನಿಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಬೇಕೆಂಬ ಹುಚ್ಚು ಈ ಮಟ್ಟಕ್ಕೂ ಹೋಗಬಹುದಾ ಎಂಬ ಪ್ರಶ್ನೆಯನ್ನೀಗ ಈ ಘಟನೆ ಹುಟ್ಟುಹಾಕಿದೆ.

ಏನಿದೂ ಘಟನೆ? : ಮಹಿಳೆ, ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಐವರು ಮಂಗಳವಾರ ವ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೊರಿಯರ್ ಕಚೇರಿಗೆ ದೊಡ್ಡ ಪ್ಯಾಕೇಜ್ ಅನ್ನು ಹೊತ್ತು ತಂದಿದ್ದಾರೆ. ಇಷ್ಟು ದೊಡ್ಡ ಚೀಲ ನೋಡಿ ಒಳಗೆ ಏನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದ್ದು, ಈ ವೇಳೆ ಕುಟುಂಬದವರಿAದ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪ್ಯಾಕೇಜ್ ಓಪನ್ ಮಾಡಿ ನೋಡಿದ್ದಾರೆ. ಆ ವೆಳೆ ಅರೆಕ್ಷಣ
ಅವರು ಬೆಚ್ಚಿಬಿದ್ದಿದ್ದಾರೆ , ವೃದ್ಧ ವ್ಯಕ್ತಿಯೋರ್ವರು ಚೀಲದಲ್ಲಿ ಇರೋದು ಗೊತ್ತಾಗಿದೆ. ಆತ ಕೊರಿಯರ್ ಮಾಡಲು ಬಂದಿದ್ದ ಕುಟುAಬದ ಪೈಕಿ ಮಹಿಳೆಯ ತಂದೆ ಎಂಬುದು ತಿಳಿದುಬಂದಿದೆ.ಅವರು ಚೀಲದಲ್ಲಿ ಉಸಿರಾಡಲೂ ಕಷ್ಟ ಪಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಹೀಗಿದ್ದರೂ ಕುಟುಂಬದವರು ಮಾತ್ರ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ . ಯುಗಾದಿ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳು ಸಿಗದ ಸಮಸ್ಯೆಯನ್ನು ತೋರಿಸಲು, ಮನುಷ್ಯನನ್ನೇ ಕೊರಿಯರ್ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಸಂದೇಶ ದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲು ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇವರ ಹುಚ್ಚಾಟದ ಬಗ್ಗೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರೂ, ಇಷ್ಟು ದೂರ ಬಂದು
ಇಷ್ಟು ಕಷ್ಟಪಟ್ಟಿದ್ದೇವೆ . ದಯವಿಟ್ಟು ಪಾರ್ಸೆಲ್ ತೆಗೆದುಕೊಲ್ಲಿ ಎಂದು ಮತ್ತೆ ಮೊಂಡುತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಖಾಕಿ, ಕುಟುಂಬಸ್ಥರನ್ನು ಠಾಣೆಗೆ ಕರೆದೊಯ್ದಿದೆ. ತಮ್ಮದು ತಪ್ಪಾಯ್ತು ಎಂದು ಕುಟುಂಬಸ್ಥರು ಕ್ಷಮೆಯಾಚನೆ ಮಾಡಿದ ವಿಡಿಯೋ ದಾಖಲಿಸಿಕೊಂಡ ಪೊಲೀಸರು, ಗಂಭೀರ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular