Friday, February 13, 2026
Flats for sale
Homeಕ್ರೀಡೆಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಡಲು ಷರತ್ತುಬದ್ದ ಅನುಮತಿ.

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಡಲು ಷರತ್ತುಬದ್ದ ಅನುಮತಿ.

ಬೆಂಗಳೂರು : ಜೂನ್ 4 ರ ಕೆಎಸ್‌ಸಿಎ ಕಾಲ್ತುಳಿತದ ನಂತರ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಗೂ ಐಪಿಎಲ್ ಪಂದ್ಯಗಳು ನಡೆಯುವುದು ಖಚಿತಗೊಂಡಿದೆ. ನಿರೀಕ್ಷೆಯಂತೆಯೇ ಗುರುವಾರ ಸಚಿವ ಸಂಪುಟದ ನಿರ್ಧಾರದ ಬಳಿಕ ಆರ್‌ಸಿಬಿಗೆ ಬೆಂಗಳೂರಿನಲ್ಲೇ ತವರಿನ ಪಂದ್ಯಗಳನ್ನು ಆಡಲು ಸರ್ಕಾರ ಅನುಮತಿ ನೀಡಿದ್ದು, ಕೆಲವೊಂದು
ಷರತ್ತುಗಳನ್ನೂ ವಿಧಿಸಿದೆ.

ಆದರೆ, ಈ ಸರ್ಕಾರದ ಅನುಮತಿಯಲ್ಲಿ ಕೆಲವೊಂದು ಷರತ್ತುಗಳು ಕೂಡ ಒಳಗೊಂಡಿದ್ದು, ಕಡ್ಡಾಯವಾಗಿ ಪಾಲಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ)ಗೆ ಸೂಚಿಸಲಾಗಿದೆ. ಪಂದ್ಯಗಳ ವೇಳೆ ಸುವ್ಯವಸ್ಥಿತ ವ್ಯವಸ್ಥೆಗಳನ್ನು ಹೊಂದಿರಬೇಕಾಗಿದ್ದು, ಅಭಿಮಾನಿಗಳು ಸ್ಟೇಡಿಯಂನಿAದ ನಿರ್ಗಮಿಸುವ ಗೇಟ್‌ಗಳ ಬಗ್ಗೆ ಗಮನವಿರಿಸಲು ಸೂಚಿಸಲಾಗಿದೆ. 25 ಸಾವಿರ ಟಿಕೆಟ್ ನೀಡಲು ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular