ಮಂಗಳೂರು ; ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ರ ಸೆಕ್ಷನ್ 255(2) ರ ಅಡಿಯಲ್ಲಿ ಪ್ರವೀಣ್ ಪೂಜಾರಿ ಅವರು ಚೆಕ್ ಬೌನ್ಸ್ ಪ್ರಕಾರಣಕ್ಕೆ ದಾಖಲಿಸಿದ ದೂರಿನಂತೆ ವಿಚಾರಣೆ ನಡೆಸಿದ ಮಂಗಳೂರು ಜೆ ಎಂ ಎಫ್ ಸಿ ನ್ಯಾಯಾಲಯ ಆರೋಪಿ ಚಂದರಶೇಖರ್ ತಪ್ಪಿತಸ್ಥನೆಂದು ಘೋಷಿಸಿದ ಸಜೆ ವಿಧಿಸಿದೆ.
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಪರಿಣಾಮವಾಗಿ ಆರೋಪಿಗೆ ರೂ.7,25,000/- ದಂಡ ವಿಧಿಸಲಾಗಿದೆ. ತಪ್ಪಿದಲ್ಲಿ, ಅವರು 5 ತಿಂಗಳ ಅವಧಿಗೆ ಸರಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಮತ್ತು ರೂ.7,25,000/- ದಂಡದ ಮೊತ್ತವನ್ನು ವಸೂಲಿ ಮಾಡಿದ ನಂತರ, ರೂ.7,20,000/- ಮೊತ್ತವನ್ನು ದೂರುದಾರರಿಗೆ CrPC ಯ ಸೆಕ್ಷನ್.357 ರ ಅಡಿಯಲ್ಲಿ ಪರಿಹಾರವಾಗಿ ಪಾವತಿಸಬೇಕು. ಮತ್ತು ಉಳಿದ ರೂ.5,000/- ಎ ಮೊತ್ತವನ್ನು ರಾಜ್ಯದ ವೆಚ್ಚವಾಗಿ ಭರಿಸಬೇಕು. ತಪ್ಪಿದಲ್ಲಿ ಆರೋಪಿಯ ಜಾಮೀನು ಬಾಂಡ್ ಮತ್ತು ಶ್ಯೂರಿಟಿ ಬಾಂಡ್ ರದ್ದಾಗುತ್ತದೆ.
ಕಕ್ಷದಾರ ಪ್ರವೀಣ್ ಪೂಜಾರಿ ಪರವಾಗಿ ನ್ಯಾಯಾಲಯದಲ್ಲಿ ನ್ಯಾಯವಾದಿ ರಾಘವೇಂದ್ರ ರಾವ್, ವರ್ಟಿ ಸ್ ಲೇಜಿಸ್, ಗೌರಿ ಶೆಣೈ, ರೋಯಿಸ್ತನ್, ಆನಗ ವಾದಿಸಿದ್ದರು.


