Saturday, July 18, 2026
Homeಜಿಲ್ಲೆಮಂಗಳೂರು : ಸುಲಿಗೆ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಪ್ರಕಟವಾದ ಬಳಿಕ ತಲೆಮರಿಸಿಕೊಂಡಿದ್ದ ಆರೋಪಿಯ ಬಂಧನ.

ಮಂಗಳೂರು : ಸುಲಿಗೆ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಪ್ರಕಟವಾದ ಬಳಿಕ ತಲೆಮರಿಸಿಕೊಂಡಿದ್ದ ಆರೋಪಿಯ ಬಂಧನ.

ಮಂಗಳೂರು : ಸುಲಿಗೆ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಪ್ರಕಟವಾದ ಬಳಿಕ ತಲೆಮರಿಸಿಕೊಂಡಿದ್ದಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ನಿವಾಸಿ ನವೀನ್ ಸಿಕ್ವೇರಾ ( 52) ಎಂದು ತಿಳಿದುಬಂದಿದೆ.

ಈತನ ಮೇಲೆ 2011 ಹಾಗೂ 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ ನಂಬರ್ 195/2011 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015 ರಲ್ಲಿ ಮೂರು ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 5000 ಜುಲ್ಮಾನೆ ವಿಧಿಸಿ ತೀರ್ಪು ನೀಡಿತ್ತು.ಆರೋಪಿಯು ಮಾನ್ಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ ಪೆಟಿಷನ್ ಅರ್ಜಿ ಸಲ್ಲಿಸಿದ್ದು ಅರ್ಜಿ ಪರಿಶೀಲಿಸಿದ ಮಾನ್ಯ ಉಚ್ಚ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಒಂದು ವರ್ಷ ಸಾಧಾ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 15000 ದಂಡ ವಿಧಿಸಿ ಈ ಶಿಕ್ಷೆಯನ್ನು 2022ರ ಒಳಗೆ ಅನುಭವಿಸುವಂತೆ ಇದಕ್ಕೆ ತಪ್ಪಿದಲ್ಲಿ ಮಾನ್ಯ ಜಿಲ್ಲಾ ನ್ಯಾಯಾಲಯದ ಈ ಹಿಂದಿನ ಆದೇಶದ ಪ್ರಕಾರ ಶಿಕ್ಷೆಗೆ ಒಳಪಡಬೇಕಾಗಿ ಆದೇಶಿಸಿ ತೀರ್ಪು ಪ್ರಕಟ ಮಾಡಿದೆ. ತೀರ್ಪು ಪ್ರಕಟವಾದ ನಂತರ ಆರೋಪಿ ತಲೆ ಮರೆಸಿಕೊಂಡಿದ್ದು ನ್ಯಾಯಾಲಯವು ಈತನ ಮೇಲೆ ಬಂಧನದ ವಾರೆಂಟ್ ಹೊರಡಿಸಿದೆ.

ಈತನನ್ನು ದಿ.14 ರಂದು ಪೊಲೀಸರು ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಹೊನ್ನಕಟ್ಟೆಯ ಸುಪ್ರಭಾತ ಬಾರ್ ಅಂಡ್ ರೆಸ್ಟೋರೆಂಟ್ ಎಂಬಲ್ಲಿ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಈ ಹಿಂದೆ ನೀಡಿದ ತೀರ್ಪಿನಂತೆ ಮೂರು ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ 5000/- ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿ ಆದೇಶಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular