Tuesday, February 3, 2026
Flats for sale
Homeಜಿಲ್ಲೆಮಂಗಳೂರು : ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್‌ನಲ್ಲಿ ಮಂಗಳೂರು ಬೀಚ್ ಉತ್ಸವ .

ಮಂಗಳೂರು : ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್‌ನಲ್ಲಿ ಮಂಗಳೂರು ಬೀಚ್ ಉತ್ಸವ .

ಮಂಗಳೂರು : ತಪಸ್ಯ ಫೌಂಡೇಶನ್ ವತಿಯಿಂದ 4ನೇ ಆವೃತ್ತಿಯ ಮಂಗಳೂರು ಟ್ರಯಾಥ್ಲಾನ್, ಮಂಗಳೂರು ಬೀಚ್ ಮ್ಯಾರಥಾನ್ ಹಾಗೂ ಮಂಗಳೂರು ಬೀಚ್ ಫೆಸ್ಟಿವಲ್ ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದೆ ಎಂದು ತಪಸ್ಯ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಸಬಿತಾ ಆರ್. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಈ ಉತ್ಸವದಲ್ಲಿ ಸಂಗ್ರಹವಾಗುವ ನಿಧಿ ಕ್ಯಾನ್ಸರ್ ಪ್ಯಾಲಿಯೇಟಿವ್ ಕೇರ್‌ಗೆ ಬಳಕೆಯಾಗಲಿದೆ. ಬೀಚ್ ಉತ್ಸವದ ಅಂಗವಾಗಿ ಒಲಿಂಪಿಕ್ ಮಟ್ಟದ ಟ್ರಯಥ್ಲಾನ್‌ನಡಿ ಡುಯಾಥ್ಲಾನ್, 40 ಕೆ ಡ್ರೀಮ್ ಸೈಕ್ಲಿಂಗ್, ಒಲಿಂಪಿಕ್ ಡಿಸ್ಟನ್ಸ್ ಟ್ರಯಾಥ್ಲಾನ್, ಸ್ಟಿçಂಟ್ ಟ್ರಯಾಥ್ಲಾನ್, ಟೀಮ್ ರಿಲೇ ಟ್ರಯಾಥ್ಲಾನ್ ಸೇರಿದಂತೆ ನಾನಾ ಸ್ವರ್ಧೆಗಳು ನಡೆಯಲಿದೆ ಎಂದರು.

ಈ ವೇಳೆ ಅಗ್ರಿ ಟೆಕ್ ಎಕ್ಸ್ಪೋ, ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, ಕೆಡಬ್ಲ್ಯುಎ ರಾಜ್ಯ ಮಟ್ಟದ ಬೀಚ್ ಕುಸ್ತಿ, ಇಮರ್ಜ್ ಬೀಚ್‌ಸೈಡ್ ಸ್ಟಾರ್ಟಪ್ ಕಾಂಕ್ಲೇವ್,ಬೈಕ್ ಸ್ಟಂಟ್ ಶೋ, ನೃತ್ಯಾಂತಾರ ನೃತ್ಯ ಸ್ಪರ್ಧೆ,ಎಸ್‌ಎಫ್‌ಐ ನ್ಯಾಷನಲ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್, ಮೊದಲಾದ ಕಾರ್ಯಕ್ರಮಗಳು ಹಾಗೂ ಬೀಚ್ ಫೆಸ್ಟಿವಲ್ ಸಂದರ್ಭ ಕರ್ನಾಟಕ ಕುಸ್ತಿ ಸಂಘ ಹಾಗೂ ತಪಸ್ಯ ಫೌಂಡೇಶನ್ ವತಿಯಿಂದ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ.

ಜ.9ರಂದು ಸಂಜೆ 4 ಗಂಟೆಗೆ ಚಾಂಪಿಯನ್‌ಶಿಪ್‌ಗೆ ಚಾಲನೆ ದೊರೆಯಲಿದೆ. ರಾಜ್ಯದ ನಾನಾ ಜಿಲ್ಲೆಗಳ ಕುಸ್ತಿ ಪಟುಗಳೊಂದಿಗೆ ರಾಜ್ಯ, ರಾಷ್ಟç ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಪದಕ ಗಳಿಸಿರುವ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್ 15 ವಯೋಮಿತಿ ಹಾಗೂ ಅಂಡರ್ 17 ವಯೋಮಿತಿಯ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಗಳು ನಡೆಯಲಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಸ್ತಿಪಟುಗಳು ರಾಷ್ಟಿçÃಯ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪAಗೆ ಆಯ್ಕೆಯಾಗಲಿದ್ದಾರೆ.

ಜ.9ರಂದು ಮಧ್ಯಾಹ್ನ 3.30ರಿಂದ ಕುಸ್ತಿ ಪಂದ್ಯಾಟ ಆರಂಭವಾಗಲಿದ್ದು ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಎಲ್ಲ ವಿಭಾಗದ ಕುಸ್ತಿಪಟುಗಳ ದೇಹತೂಕ ಪಡೆಯಲಾಗುತ್ತದೆ. ಜ. 10ರಂದು ಸಂಜೆ 3.30ಕ್ಕೆ ಎಲ್ಲಾ ವಿಭಗಾದ ಫೈನಲ್ ಪಂದ್ಯಾಟ ಹಾಗೂ ಮೂರನೆ ಸ್ಥಾನಕ್ಕೆ ನಡೆಯುವ ಕುಸ್ತಿ ಪಂದ್ಯಾಟ ನಡೆಯಲಿದೆ

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬೀಚ್ ರೆಸ್ಲಿಂಗ್ ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ನವೀನ್ ಹೆಗ್ಡೆ, ರಿತೇಶ್, ಮುಹಮ್ಮದ್, ಅರವಿಂದ್, ಕರುಣಾಕರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular