ಢಾಕಾ : ಬಾಂಗ್ಲಾದೇಶದ ಜೆನೈದಾ ಉಪ ಜಿಲ್ಲೆಯ ಕಾಲಿಗಂಜ್‌ನಲ್ಲಿ 40 ವರ್ಷದ ಹಿಂದೂ ಮಹಿಳೆಯ ಮೇಲೆ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿ, ಮರಕ್ಕೆ ಕಟ್ಟಿ ಹಾಕಿ ಕೂದಲನ್ನು ಕತ್ತರಿಸಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಎರಡೂವರೆ ವರ್ಷಗಳ ಹಿಂದೆ ಕಾಲಿಗಂಜ್ ಪುರಸಭೆಯ ವಾರ್ಡ್ ಸಂಖ್ಯೆ 7 ರಲ್ಲಿ ಶಾಹಿನ್ ಮತ್ತು ಆತನ ಸಹೋದರನಿಂದ 2 ಮಿಲಿಯನ್ ಟಾಕಾಗೆ ಎರಡು ಅಂತಸ್ತಿನ ಮನೆ ಜೊತೆಗೆ ಮೂರು ದಶಮಾಂಶ ಭೂಮಿಯನ್ನು ಖರೀದಿಸಿದ್ದಾಗಿ ಮಹಿಳೆ ತನ್ನ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಅದರ ನಂತರ, ಶಾಹಿನ್ ಆಕೆಗೆ ಅಸಭ್ಯವಾಗಿ ಪ್ರಸ್ತಾಪಗಳನ್ನು ಮಾಡಲು ಪ್ರಾರಂಭಿಸಿದರು ಮತ್ತು ಆಕೆ ನಿರಾಕರಿಸಿದಾಗ ಕಿರುಕುಳ ನೀಡುತ್ತಿದ್ದರು.
ಶನಿವಾರ ಸಂಜೆ, ವಿಧವೆಯ ಹಳ್ಳಿಯ ಇಬ್ಬರು ಸಂಬಂಧಿಕರು ಭೇಟಿ ನೀಡಿದ್ದಾಗ, ಶಾಹಿನ್ ಮತ್ತು ಅವನ ಸಹಚರ ಹಸನ್ ಒಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದರು. ನಂತರ ಅವರು ಆಕೆಯಿಂದ 50,000 ಟಾಕಾ (ಸುಮಾರು 37,000 ರೂ.) ನೀಡುವಂತೆ ಬೇಡಿಕೆ ಇಟ್ಟರು.ಆಕೆ ಹಣ ನೀಡಲು ನಿರಾಕರಿಸಿದಾಗ, ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಅವರನ್ನು ಓಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಕಿರುಚಲು ಪ್ರಾರಂಭಿಸಿದ ನಂತರ, ಅವರು ಆಕೆಯನ್ನು ಮರಕ್ಕೆ ಕಟ್ಟಿ, ಆಕೆಯ ಕೂದಲು ಕತ್ತರಿಸಿ, ಕೃತ್ಯವನ್ನು ರೆಕಾರ್ಡ್ ಮಾಡಿ, ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ.
ವಿಧವೆಗೆ ಚಿತ್ರಹಿಂಸೆ ನೀಡಿದ್ದು ನಂತರ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದು . ಸ್ಥಳೀಯ ನಿವಾಸಿಗಳು ಆಕೆಯನ್ನು ರಕ್ಷಿಸಿ ಜೆನೈದಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಎಂ. ಮುಸ್ತಫಿಜುರ್ ರೆಹಮಾನ್, ಮಹಿಳೆ ಆರಂಭದಲ್ಲಿ ಏನಾಯಿತು ಎಂದು ವೈದ್ಯರಿಗೆ ತಿಳಿಸಲಿಲ್ಲ ಎಂದು ಹೇಳಿದರು. ನಂತರ, ವೈದ್ಯಕೀಯ ಪರೀಕ್ಷೆಯ ನಂತರ, ಆಕೆಯನ್ನು ದೌರ್ಜನ್ಯಕ್ಕೆ ಒಳಪಡಿಸಲಾಗಿದೆ ಎಂದು ಅವರಿಗೆ ತಿಳಿದುಬಂದಿದೆ.ಬಳಿಕ ಮಹಿಳೆ ಕಾಲಿಗಂಜ್ ಪೊಲೀಸ್ ಠಾಣೆಯಲ್ಲಿ ಶಾಹಿನ್ ಮತ್ತು ಹಸನ್ ಹೆಸರಿಸಿ ದೂರು ದಾಖಲಿಸಿದ್ದಾರೆ.
“ನಾವು ಸಂತೃಸ್ಥ ಪೊಲೀಸ್ ಠಾಣೆಗೆ ಕರೆಸಿ ದೂರು ದಾಖಲಿಸಿಕೊಂಡಿದ್ದೇವೆ. ತನಿಖೆಯ ನಂತರ, ಪೊಲೀಸರು ಸಾಧ್ಯವಾದಷ್ಟು ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳುತ್ತಾರೆ” ಎಂದು ಜೆನೈದಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿಲ್ಲಾಲ್ ಹೊಸೈನ್ ಹೇಳಿದ್ದಾರೆ.


