ಮಂಗಳೂರು ; ಪೂಜಾ ಆಚಾರ್ಯಳಿಗೆ ಹುಟ್ಟಿದ ಮಗು ನನ್ನದು ಅಲ್ಲವೇ ಅಲ್ಲ ಎಂದು ಕೃಷ್ಣ ಜೆ.ರಾವ್ ಹೇಳುತ್ತಾನೆ. ಆದರೆ ಡಿ ಎನ್ ಎ ರಿಪೋರ್ಟ್ ನಲ್ಲಿ ಅವನದ್ದೇ ಮಗು ಎಂಬುದಾಗಿ ಸಾಬೀತಾಗಿದೆ . ಆರೋಪಿ ಕೃಷ್ಣನಲ್ಲಿ ವಿವಾಹವಾಗುವಂತೆ ಹಲವು ಬಾರಿ ಕೇಳಿಕೊಂಡರು ಆತ ಅದಕ್ಕೆ ಸಮ್ಮತಿಸುತ್ತಿಲ್ಲ. ಪೂಜಾ ಆಚಾರ್ಯ ಏಳೂವರೆ ತಿಂಗಳ ಗರ್ಭಿಣಿಯಾಗಿರುವಾಗಲೇ ಜಗನ್ನಿವಾಸ್ ರಾವ್ ೮ ಲಕ್ಷದ ಹಣದ ಆವಿಷವನ್ನು ಒಡ್ಡಿ ಮಗುವನ್ನು ಹೊಟ್ಟೆಯಿಂದ ತೆಗೆಸುವಂತೆ ಒತ್ತಾಯಿಸಿದ್ದ ಅದು ಸಾಧ್ಯವಾಗಲಿಲ್ಲ . ನಂತರ ಹುಟ್ಟಿದ ಮಗುವನ್ನು ಸಾಂತ್ವನ ಕೇಂದ್ರಕ್ಕೆ ಬಿಡುವಂತೆ ಜಗನ್ನಿವಾಸ್ ರಾವ್ ಹೇಳಿದ್ದಾನೆ. ಆ ಹೇಳಿಕೆಯ ವಾಯ್ಸ್ ರೆಕಾರ್ಡ್ ನನ್ನ ಬಳಿ ಇದೆ ಎಂದು ಕಾಂಗ್ರೆಸ್ ವಕ್ತಾರೆ ಪ್ರತಿಭಾ ಕುಳಾಯಿ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಹಿಂದೂ ಯುವತಿ ಪೂಜಾ ಆಚಾರ್ಯ ದಿನವೂ ಈ ಘಟನೆಯಿಂದ ನರಕವನ್ನು ಅನುಭವಿಸುತ್ತಾ ಇದ್ದಾಳೆ . ಅದೆಷ್ಟೋ ಭಾರಿ ಆತ್ಮ ಹತ್ಯೆಗೂ ಪ್ರಯತ್ನಿಸಿದ್ದಾಳೆ . ಪುತ್ತೂರಿನ ಒಬ್ಬಳು ಹಿಂದೂ ಹೆಣ್ಣು ಮಗಳಿಗೆ ಆದ ಅನ್ಯಾಯವನ್ನು ಕೇಳಲು ಯಾರು ಹಿಂದೂ ನಾಯಕರು ಇಲ್ಲವೇ … ? ಅದುವೇ ಮುಸ್ಲಿಂ ಯುವಕ ಆತನ ಜಾಗದಲ್ಲಿ ಇದ್ದಿದ್ದರೆ ರಾಜಕೀಯ ನಡೆಯುತಿತ್ತು ಅಲ್ಲವೇ ಎಂದು ಪ್ರಶ್ನೆ ಮಾಡಿದರು .
ಹಿಂದೂ ನಾಯಕ ಪ್ರಭಾಕರ್ ಭಟ್ ರಿಗೆ ಈ ಘಟನೆ ಕಣ್ಣಿಗೆ ಕಾಣುವುದಿಲ್ಲವೇ .. ! ? ಅವರು ಹಿಂದುಗಳಲ್ಲಿ ಮಕ್ಕಳು ಮಾಡಿ ಅಂತ ಭಾಷಣಗಳಲ್ಲಿ ಹೇಳುತ್ತಾರೆ . ಆದರೆ ಮದುವೆ ಆದ ಮೇಲಾ ಮದುವೆಗೆ ಮೊದಲಾ ಎಂದು ಸ್ಪಷ್ಟನೆಯನ್ನು ನೀಡಲಿಲ್ಲ . ಮೊನ್ನೆ ಅರುಣ್ ಕುಮಾರ್ ಪುತ್ತಿಲ್ಲ ಶ್ರೀನಿವಾಸ ಕಲ್ಯಾಣವನ್ನು ಮಾಡಿಸಿದರು . ಅದಕ್ಕಿಂತ ಈ ಬಾಲಕಿಯ ವಿವಾಹವನ್ನು ಮಾಡಿಸಬಹುದಿತ್ತಲ್ಲವೇ ..?
ಕೆಪಿ ನಂಜುಡಿ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳದ ವಿಚಾರ ನಾನು ಹೇಳುತ್ತೇನೆ .. ! ಜಗನ್ನಿವಾಸ್ ರಾವ್ ನ ವಾಯ್ಸ್ ರೆಕಾರ್ಡ್ ನನ್ನ ಬಳಿ ಇದೆ ಅದರಲ್ಲಿ ಆತ ಹೇಳಿದಂತೆ ಪೂಜಾ ಆಚಾರ್ಯಳ ಮಗುವನ್ನು ಸಾಂತ್ವನ ಕೇಂದ್ರಕ್ಕೆ ಬಿಡ್ಬೇಕಂತೆ! ಆ ಬಳಿಕ ಹುಡುಗಿಯನ್ನು ವಿವಾಹವಾಗುತ್ತಾನೆ ಅಂತೆ , ವಿವಾಹವಾದ ಕೆಲವೇ ದಿನಗಳಲ್ಲಿ ಡಿವೋರ್ಸ್ ಕೊಡಿಸುತ್ತಾನೆ ,ಬಳಿಕ ವಿವಾಹದ ಪರಿಹಾರವಾಗಿ ೫೦ ಲಕ್ಷ ಕೊಡುವುದಾಗಿ ಇದೆ.
ಹಣದ ಆವಿಷವನ್ನು ಒಡ್ಡಿ ಶ್ರೀಮಂತರು ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಇದು ಬಿಹಾರವಲ್ಲ .ಇದು ಬುದ್ದಿವಂತರ ಜಿಲ್ಲೆ . ಕೃಷ್ಣ ಮನೆ ಅಳಿಯ ನಾಗುವುದಾದರೆ ನಾನು ೫೦ ಲಕ್ಷ ಕೊಡಲು ಸಿದ್ದ ಎಂದು ಕುಳಾಯಿ ತಿಳಿಸಿದರು .
ಮಗುವಿಗೆ ಇದುವರೆಗೂ ನಾಮಕರಣವಾಗಿಲ್ಲ . ಹಾಗಾಗಿ ಕಲಡ್ಕದಲ್ಲಿ ಜನವರಿ ೨೪ ರಂದು ಮಗುವಿನ ನಾಮಕರಣವನ್ನು ಹಮ್ಮಿಕೊಳ್ಳಲಾಗುವುದು . ಕೃಷ್ಣ ಜೆ ರಾವ್ ಒಂದು ವೇಳೆ ಈಕೆಯನ್ನು ವಿವಾಹವಾಗದೆ ಹೋದಲ್ಲಿ ಆತನ ಬೇಲ್ ಅನ್ನು ಪ್ರಶ್ನೆ ಮಾಡಿ ಮತ್ತೆ ಜೈಲಿಗೆ ಕಳಿಸಲಾಗುವುದೆಂದು ಎಚ್ಚರಿಸಿದರು .
ಪೂಜಾ ಆಚಾರ್ಯಳಿಗೆ ನ್ಯಾಯ ಸಿಗಬೇಕ್ಕೆಂಡುವ ಉದ್ದೇಶದಿಂದ ದೊಡ್ಡ ಮಟ್ಟದ ಹೋರಾಟವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಪೂಜಾ ಆಚಾರ್ಯ ಮತ್ತು ಆಕೆಯ ಕುಟುಂಬಸ್ಥರು ಉಪಸ್ತಿತರಿದ್ದರು.


