Saturday, July 18, 2026
Homeಜಿಲ್ಲೆಮಂಗಳೂರು : ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಪ್ರಯುಕ್ತ 'ನಶ...

ಮಂಗಳೂರು : ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಪ್ರಯುಕ್ತ ‘ನಶ ಮುಕ್ತ ಮಂಗಳೂರು’ ಅಭಿಯಾನ.

ಮಂಗಳೂರು : ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಪ್ರಯುಕ್ತ ನಶೆ ಮುಕ್ತ ಮಂಗಳೂರು’ ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ಬ್ರಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸನ್ಮಾನ್ಯ ಕರ್ನಾಟಕ ರಾಜ್ಯ ಸಬಾಧ್ಯಕ್ಷರಾದ ಯುಟಿ ಖಾದರ್, ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಸನ್ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಹಿತ ಹಲವು ಗಣ್ಯರು ಉಪಸ್ಥಿತರಿರುತ್ತಾರೆ. ವಿಶೇಷವಾಗಿ ಮಂಗಳೂರು ಬಿಷಪ್, ರಾಮಕೃಷ್ಣ ಮಠದ ಸ್ವಾಮೀಜಿಗಳು ಮತ್ತು ಮಂಗಳೂರು ಮುಸ್ಲಿಂ ಧಾರ್ಮಿಕ ಮುಖಂಡರು ಅಭಿಯಾನದೊಂದಿಗೆ ಸೇರಿಕೊಳ್ಳಲಿದ್ದಾರೆ ಹಾಗೂ ನಮ್ಮ ತುಳುನಾಡಿನ ಪ್ರಸಿದ್ಧ ನಟರು ನಮ್ಮೊಂದಿಗೆ ಕೈ ಜೋಡಿಸಲಿದ್ದಾರೆ. ಈ ಕಾರ್ಯಕ್ರಮವು ವಿಶೇಷವಾಗಿ ಯುವಕರಿಗೆ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಿದ್ದು ಇದರ ಅಂಗವಾಗಿ ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ನಶಾಮುಕ್ತಿ ಜಾಗೃತಿ, ಡ್ರಗ್ ಮುಕ್ತ ಹಲವು ಕಾರ್ಯಕ್ರಮಗಳನ್ನು ತೀರ್ಮಾನಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಫೌಂಡರ್ ಮತ್ತು ಚೇರ್ಮೇನ್, ಮೇಕ್ ಎ ಚೇಂಚ್ ಫೌಂಡೇಶನ್ ಸುಹೈಲ್ ಕಂದಕ್ ರವರು ತಿಳಿಸಿದ್ದಾರೆ.

ಇಂದಿನವರಿಗೆ, 6 ಕಾಲೇಜ್ ಕ್ಯಾಂಪಸ್ awareness ಕಾರ್ಯಾಗಾರ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪೋಸ್ಟರ್ ಅಭಿಯಾನ, ಸಂಘ ಮತ್ತು ಸಂಸ್ಥೆಗಳಲ್ಲಿ ಮಾದಕದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಈ ಕಾರ್ಯಕ್ರಮವು ಯುವಕರಲ್ಲಿ ಮಾದಕದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೃಜನಾತ್ಮಕ ಸಮಾಜವನ್ನು ಕಟ್ಟುವ ಉದ್ದೇಶವನ್ನು ಹೊಂದಿದ್ದು ಅಭಿಯಾನದ ಉದ್ಘಾಟನೆಯು ತಾರೀಕು.ಡಿಸೆಂಬರ್ 27, 2025 ರಂದು ಟಿ.ಎಂ.ಎ.ವೈ. ಇಂಟರ್‌ನ್ಯಾಷನಲ್ ಕನ್‌ವೆನ್ಸನ್ ಸೆಂಟರ್, ಮಂಗಳೂರಲ್ಲಿ ನಡೆಯಲಿದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು, ಮುಖ್ಯವಾಗಿ ವಿದ್ಯಾರ್ಥಿಗಳು ಭಾಗವಹಿಸಲು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಾ| ರುಕ್ಸಾನ ಮಂಗಳೂರು: ಸೈಕೋಲಾಜಿನ್ಸ್, ಗುರು ಪ್ರಸಾದ್ ಸಹ ಸ್ಥಾಪಕರು, ಬಾರ್ನ್ ಅಗೇನ್ ರಿಕವರಿ ಸೆಂಟರ್,ಬಷೀರ್ ಡಿಎಕ್ಸ್ ಸಹ ಸ್ಥಾಪಕರು, ಮೇಕ್ ಎ ಚೇಂಜ್ ಫೌಂಡೇಶನ್,ದಿನೇಶ್ ಮುಳೂರು ರಾಜ್ಯ ಸಂಯೋಜಕರು ಭೀಮ್ ಆರ್ಮಿ ಕರ್ನಾಟಕ ವಿಶ್ವಾ ಮಿಷನ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular