ಇಸ್ಲಾಮಾಬಾದ್ : ಬಾಂಗ್ಲಾದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಮಿಲಿಟರಿ ದಾಳಿ ನಡೆಸುವುದಾಗಿ ಪಾಕಿಸ್ತಾನ ಮುಸ್ಲಿಂ ಲೀಗ್ ನಾಯಕನೊಬ್ಬ ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ.
ಭಾರತದ ವಿರುದ್ಧ ವಿಡಿಯೋ ಸಂದೇಶ ಹರಿಬಿಟ್ಟಿರುವ ಪಾಕಿಸ್ತಾನ ಪ್ರಧಾನಿ ಷರೀಫ್ ಪಕ್ಷದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ, ಬಾಂಗ್ಲಾದೇಶದಲ್ಲಿ ಯುವ ನಾಯಕ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೇ ಮಾತನಾಡಿ, ಭಾರತ ಏನಾದರೂ ಬಾಂಗ್ಲಾದೇಶದ ಮೇಲೆ ದಾಳಿ ನಡೆಸಿದರೆ ಅಥವಾ ಬಾಂಗ್ಲಾದೇಶದ ಮೇಲೆ ಯಾರಾದರೂ ಕೆಂಗಣ್ಣು ಹರಿಸಿದರೆ, ಪಾಕಿಸ್ತಾನದ ಪ್ರಜೆಗಳು, ಪಾಕಿಸ್ತಾನಿ ಸೇನೆ ಸುಮ್ಮನೆ ಇರುವುದಿಲ್ಲ. ನಮ್ಮ ಕ್ಷಿಪಣಿಗಳು ದೂರವಿಲ್ಲ ಎಂದು ಹೇಳಿದ್ದಾನೆ.


