ನವದೆಹಲಿ: ತಿಂಗಳ ಆರಂಭದಲ್ಲಿ 647 ಜನರನ್ನು ಬಲಿತೆಗೆದುಕೊಂಡ ದಿತ್ವಾ ಚಂಡಮಾರುತದಿAದ ಕಂಗೆಟ್ಟಿರುವ ಶ್ರೀಲಂಕಾಕ್ಕೆ ಭಾರತ 3999 ಕೋಟಿ ರೂ. ಸಮಗ್ರ ಸಹಾಯಹಸ್ತದ ಪ್ಯಾಕೇಜ್ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ರಾಯಭಾರಿಯಾಗಿ ಕೊಲಂಬೊಕ್ಕೆ ತೆರಳಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಈ ಪ್ಯಾಕೇಜ್ ಘೋಷಿಸಿದ್ದಾರೆ. ೪೫೦ ಮಿಲಿಯನ್ ಡಾಲರ್ ಪರಿಹಾರದಲ್ಲಿ 350 ಮಿಲಿಯನ್ ಡಾಲರ್ ರಿಯಾಯಿತಿ ದರದ ಸಾಲವಾಗಿದ್ದರೆ 100 ಮಿಲಿಯನ್ ಡಾಲರ್ ಅನುದಾನವಾಗಿದೆ.
ಮೋದಿಯಿಂದ ಒಗ್ಗಟ್ಟಿನ ಸಂದೇಶ: ಇದೇ ಸಂದರ್ಭದಲ್ಲಿ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ್ ದಿಸ್ಸಾ ನಾಯಕೆ ಅವರನ್ನು ಭೇಟಿಯಾಗಿ ಚಂಡಮಾರುತದಿAದ ಚೇತರಿಸುತ್ತಿರುವ ಶ್ರೀಲಂಕಾಕ್ಕೆ ಪ್ರಧಾನಿ ಮೋದಿಯವರ ಶುಭಾಶಯ ಹಾಗೂ ಒಗ್ಗಟ್ಟಿನ ಸಂದೇಶ ನೀಡಿದರು.
ಶ್ರೀಲಂಕಾಕ್ಕೆ ಮೊದಲ ಪ್ರತಿಸ್ಪಂದಕನಾಗಿ ಕಟ್ಟಡಗಳ ಹಸ್ತಾಂತರ ಹಾಗೂ ೪೫೦ ಮಿಲಿಯನ್ ಡಾಲರ್ ಸಹಾಯಹಸ್ತ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚು ಹಾನಿಗೊಳಗಾದ ರಸ್ತೆ, ರೈಲು ಹಳಿ ಹಾಗೂ ಸೇತುವೆಗಳ ಮರು ನಿರ್ಮಾಣ ಹಾಗೂ ಮನೆಗಳ ದುರಸ್ತಿ ಮತ್ತು ಆರೋಗ್ಯ,ಶಿಕ್ಷಣ ವ್ಯವಸ್ಥೆ, ಕೃಷಿಗೆ ಬೆಂಬಲ ನೀಡುವ ಉದ್ದೇಶಕ್ಕಾಗಿ ಈ ಪ್ಯಾಕೇಜ್ ನೀಡಲಾಗಿದೆ.


