ಬಾಗಲಕೋಟೆ : ಪತಿಯ ಸಾವಿನ ಸುದ್ದಿ ಕೇಳಿ ಮನೆಯಲ್ಲಿ ಪತ್ನಿ ಮನೆಯಲ್ಲಿ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.
ಹೃದಯವಿದ್ರಾವಕ ಘಟನೆಯಲ್ಲೂ ದಂಪತಿ ಸಾವಿನಲ್ಲಿ ಒಂದಾಗಿದ್ದಾರೆ, ಶಶಿಧರ (40) ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಸಾವಿನ ಸುದ್ದಿ ಕೇಳಿ ಪತ್ನಿ ಸರೋಜಾ(35) ಮನೆಯಲ್ಲಿ ಸಾವನ್ನಪ್ಪಿದ್ದಾರೆ.
ಚಿನ್ನದ ಅಂಗಡಿ ನಡೆಸುತ್ತಿದ್ದ ಶಶಿಧರ ರವರು ಹದಿನೈದು ವರ್ಷದ ಹಿಂದೆ ದಂಪತಿಗೆ ಮದುವೆಯಾಗಿದ್ದು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ.ಇಬ್ಬರ ಸಾವಿನಿಂದ ಮನೆಯಲ್ಲಿ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.


