Tuesday, November 4, 2025
Flats for sale
Homeರಾಜ್ಯಶಿವಮೊಗ್ಗ : ಮನೆ ಮಾಲೀಕನ ಮೃತದೇಹ ಕಂಡು ಅಲ್ಲೇ ಪ್ರಾಣ ಬಿಟ್ಟ ಪ್ರೀತಿಯ ನಾಯಿ..!

ಶಿವಮೊಗ್ಗ : ಮನೆ ಮಾಲೀಕನ ಮೃತದೇಹ ಕಂಡು ಅಲ್ಲೇ ಪ್ರಾಣ ಬಿಟ್ಟ ಪ್ರೀತಿಯ ನಾಯಿ..!

ಶಿವಮೊಗ್ಗ : ಶ್ವಾನ ಪ್ರಿಯರೆಂದರೆ ಹೀಗೇನೆ ತಮ್ಮ ಮನೆಯಲ್ಲಿರುವ ನಾಯಿಯನ್ನು ತುಂಬಾ ನೆಚ್ಚಿಕೊಂಡಿರುತ್ತಾರೆ.ಅಂತೆಯೇ ಶ್ವಾನ ಕೂಡ ತನ್ನ ಮಾಲೀಕನಿಗೂ ಪ್ರೀತಿ ನೀಡುತ್ತದೆ.ಇದೊಂದು ಮನಕುಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಮನೆ ಮಾಲೀಕನ ಮೃತದೇಹ ನೋಡಿ ಆತನ ಪ್ರೀತಿಯ ಶಾನ ಕೂಡ ಪ್ರಾಣ ಬಿಟ್ಟ ಘಟನೆ ಮನಕುಲಕುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್ (61) ಅವರು ನಾಯಿಯೊಂ ದನ್ನು ಪ್ರೀತಿಯಿಂದ ಸಾಕಿದ್ದರು. ಆದರೆ ಇತ್ತೀಚೆಗೆ ಲಾರೆನ್ ಅವರು ಅನಾರೋಗ್ಯ, ದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಇವರ ಮೃತದೇಹವನ್ನು ಮನೆಗೆ ತಂದಾಗ ನೆಚ್ಚಿನ ಮಾಲೀಕನ ಶವ ಕಂಡು ಶವದ ಪಕ್ಕದಲ್ಲೇ ಮಲಗಿ ತೀವ್ರವಾಗಿ ವ್ಯಥೆ ಪಟ್ಟಿತು. ಬಳಿಕ ಶ್ವಾನವು ಅಲ್ಲಿಯೇ ಕೊನೆಯುಸಿರೆಳೆಯಿತು. ಲಾರೆನ್ಸ್ ಅಂತ್ಯ ಕ್ರಿಯೆ ಬಳಿಕ ಅವರೊಟ್ಟಿಗೆ ಸಾವನ್ನಪ್ಪಿದ ಶಾನದ ಮೃತದೇಹವನ್ನು ಮನೆಯ ಹಿಂ ಭಾಗದಲ್ಲಿಯೇ ಮಣ್ಣು ಮಾಡಲಾಗಿದೆ. ಮನುಷ್ಯರ ಜೊತೆ ಮೂಕಪ್ರಾಣಿಗಳು ಬಿಟ್ಟಿರಲಾರದ ಸಂಬಂಧ ಹೊಂದಿರು ತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

RELATED ARTICLES

LEAVE A REPLY

Please enter your comment!
Please enter your name here

Most Popular