ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ವಿರುದ್ಧ ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಷಿಕಾಗೋ, ಮಿಯಾಮಿ ಮತ್ತು ಲಾಸ್ ಏಂಜಲೀಸ್ ಸೇರಿ ದಂತೆ ಅಮೆರಿಕ 2700 ಕ್ಕೂ ಹೆಚ್ಚು ಕಡೆ ಶನಿವಾರ ನಡೆದ ನೋ ಕಿಂಗ್ ಪ್ರತಿಭಟನೆ ಯಲ್ಲಿ ಸುಮಾರು ಎಪ್ಪತ್ತು ಲಕ್ಷ ಜನರು ಪಾಲ್ಗೊಂಡರು.
ನ್ಯೂಯಾರ್ಕ್ ನಗರದ ಐತಿಹಾಸಿಕ ಟೈಮ್ಸ್ ಸ್ಕ್ವೇರ್ ಮತ್ತು ಸುತ್ತಮುತ್ತಲಿನ ಬೀದಿಗಳಲ್ಲಿ ಸಾವಿರಾರು ಜನ ಪಾಲ್ಗೊಂ ಡಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಆದರೆ ಇದು ಅಮೆರಿಕ ದ್ವೇಷ ರ‍್ಯಾಲಿ ಎಂದು ಟ್ರಂಪ್ ಮತ್ತವರ ಮಿತ್ರ ಪಕ್ಷಗಳ ನಾಯಕರು ದೂಷಿಸಿದ್ದಾರೆ.
ಪ್ರತಿಭಟನೆಗಳಿಗೆ ಮುಂಚಿತವಾಗಿ ಅಮೆರಿಕದ ಹಲವಾರು ರಾಜ್ಯಗಳಲ್ಲಿರುವ ರಿಪಬ್ಲಿಕನ್ ಪಾರ್ಟಿಗೆ ಸೇರಿದ ಗವರ್ನರ್‌ಗಳು ರಾಷ್ಟಿçÃಯ ಗಾರ್ಡ್ ಪಡೆಗಳನ್ನು ಸನ್ನದ್ಧವಾಗಿ ಇರಿಸಿದ್ದರು. ಪ್ರತಿಭಟನೆ ವೇಳೆ ಹಲವು ಕಡೆ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಪ್ರತಿಭಟನಾಕಾರರ ತಲೆ ಮೇಲೆ ಆಕಾಶದಲ್ಲಿ ಹಾರಾಡುತ್ತಿದ್ದುದು ಕಂಡುಬರುತ್ತಿತ್ತು. ಪ್ರತಿಭಟನಾಕಾರರ ಜೊತೆ ಡೆಮಾಕ್ರಟಿಕ್ ರಾಜಕಾರಣಿಗಳೂ ಇದ್ದರು. ಪ್ರತಿಭಟನೆಗಳು ಅಮೆರಿಕಕ್ಕಷ್ಟೇ ಸೀಮಿತವಾಗಿರಲಿಲ್ಲ. ಯುರೋಪಿನ ಲಂಡನ್, ಬರ್ಲಿನ್,
ಮ್ಯಾಡ್ರಿಡ್, ರೋಮ್ ನಗರಗಳಲ್ಲೂ ಟ್ರಂಪ್ ವಿರೋಧಿ ಪ್ರತಿಭಟನೆಗಳು ನಡೆದವು.
ಟ್ರಂಪ್ ಆಡಳಿತ ವಲಸಿಗರ ವಿರುದ್ಧ ನಡೆಸುತ್ತಿರುವ ಐಸಿಇ ದಾಳಿಗಳಿಂದ ಆಕ್ರೋಶ ಎದ್ದಿದ್ದು ಹಲವು ಕಡೆ ಫೆಡೆರಲ್ ಭದ್ರತಾ ಪಡೆ ನಿಯೋಜನೆಗೆ ಟ್ರಂಪ್ ಆಡಳಿತ ಮುಂದಾಗಿರುವುದು ಕೂಡ ಕಾರಣವಾಗಿದೆ. ಫೆಡೆರಲ್ ಕಾರ್ಯಕ್ರಮಗಳಿಗೆ ಭಾರಿ ಪ್ರಮಾಣದ ಅನುದಾನ ಕಡಿತ ಮಾಡಿರುವುದು ಟ್ರಂಪ್ ಅವರ ಅನೇಕ ನೀತಿ ಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.