ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಚೀನಾದ ಎಲ್ಲ ಸರಕುಗಳ ಮೇಲಿನ ಆಮದು ಸುಂಕದಲ್ಲಿ ಇನ್ನೂ ಶೇ.100 ರಷ್ಟು ಏರಿಸಿರುವುದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಯುದ್ಧ ಮತ್ತೆ ತಾರಕಕ್ಕೇರಿದೆ. ಪ್ರಸ್ತುತ ಚೀನಾ ವಸ್ತುಗಳ ಮೇಲೆ ಅಮೆರಿಕ ಶೇ.30 ಸುಂಕ ವಿಧಿಸುತ್ತಿದೆ. ಟ್ರಂಪ್ ಘೋಷಿಸಿದ ಹೊಸ ಸುಂಕದ ನಂತರ ಚೀನಾ ವಸ್ತುಗಳ ಮೇಲೆ ಹೇರುವ ಸುಂಕ ಪ್ರಮಾಣ ಶೇ.130 ಕ್ಕೇರಲಿದೆ. ಈ ಸುಂಕ ನ.೧ರಿಂದ ಅಥವಾ ಚೀನಾ ಇನ್ನು ಮುಂದೆ ತೆಗೆದುಕೊಳ್ಳುವ ಕ್ರಮಗಳನ್ನು ಅವಲಂಬಿಸಿ ಜಾರಿಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಚೀನಾ ಈಗ ವ್ಯಾಪಾರಕ್ಕೆ ಸಂಬಂಧಿಸಿದಂತೆ ತಳೆದಿರುವ ಆಕ್ರಮಣಕಾರಿ ನಿಲುವು' ಹಾಗೂ ರಫ್ತು ನಿಯಂತ್ರಣ ಕುರಿತು ಜಗತ್ತಿಗೆ ಸಾರಿದ
ವೈರತ್ವದ ಪತ್ರ’ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಟ್ರಂಪ್ ಹೇಳಿಕೊAಡಿದ್ದಾರೆ.
ಇತ್ತೀಚೆಗೆ ಚೀನಾ ತನ್ನ ಅಪರೂಪದ ಖನಿಜವಾದ ಮ್ಯಾಗ್ನೇಟ್ ರಫ್ತು ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಿದ್ದು ಸಂಸ್ಕರಣಾ ತಂತ್ರಜ್ಞಾನ ಮೇಲಿನ ನಿರ್ಬಂಧಗಳನ್ನು ವಿಸ್ತರಿಸಿದ್ದಲ್ಲದೆ, ವಿದೇಶ ರಕ್ಷಣಾ ಹಾಗೂ ಸೆಮಿಕಂಡಕ್ಟರ್ ಬಳಕೆದಾರರಿಗೆ ರಫ್ತು ಮಿತಿಗೊಳಿಸುವ ಉದ್ದೇಶ ಪ್ರಕಟಿಸಿರುವುದು ಅಮೆರಿಕ ಅಧ್ಯಕ್ಷರ ಆಕ್ರೋಶಕ್ಕೆ ಕಾರಣವಾಗಿದೆ.
ಚೀನಾ ಸಾಫ್ಟ್ ವೇರ್‌ಗೂ ಟ್ರಂಪ್ ಭಾರಿ ಹೊಡೆತ..? ಚೀನಾಕ್ಕೆ ಸಾಫ್ಟ್ವೇರ್ ರಫ್ತು ನಿಷೇಧಿಸುವುದಕ್ಕೂ ಟ್ರಂಪ್ ಗಡುವು ನಿಗದಿಪಡಿಸಿದ್ದಾರೆ. ನವೆಂಬರ್ ಒಂದರಿಂದ ಯಾವುದೇ ಮಹತ್ವದ ಸಾಫ್ಟ್ವೇರ್ ಮೇಲೆ ರಫ್ತು ನಿಯಂತ್ರಣ ಕ್ರಮವನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಆ ಮಹತ್ವದ ಸಾಫ್ಟ್ವೇರ್ ಯಾವುದೆಂಬುದನ್ನು ಅವರು ವಿವರಿಸಿಲ್ಲ. ಆದರೆ ಕಂಪ್ಯೂಟರ್‌ಗೆ ಸಂಬAಧಿಸಿದ ಕೆಲ ಸಾಫ್ಟ್ವೇರ್ ಎಂದು ಅಂದಾಜಿಸಲಾಗಿದೆ