ಮಂಗಳೂರು : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ‘ಕುಡ್ಲದ ಪಿಲಿ ಪರ್ಬ 2025’ ಕಾರ್ಯಕ್ರಮಕ್ಕೆ ಇಂದು ನಗರದ ನೆಹರೂ ಮೈದಾನದಲ್ಲಿ ಚಪ್ಪರ ಮುಹೂರ್ತ ಕಾರ್ಯ ನಡೆಯಿತು.

ಸೆ. 30 ರಂದು ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಸ್ಪರ್ಧಾಕೂಟ ‘ಕುಡ್ಲದ ಪಿಲಿ ಪರ್ಬ 2025’ ನಡೆಯಲಿದೆ.
ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದ್ದು ಸೆ. 30ರಂದು ಬೆಳಗ್ಗೆ 9 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದ್ದು, ಮಧ್ಯರಾತ್ರಿಯವರೆಗೆ ನಡೆಯಲಿದೆ. ಸಾಂಪ್ರದಾಯಿಕ ವ್ಯವಸ್ಥೆಯಡಿ ಸ್ಪರ್ಧೆ ನಡೆಯಲಿದ್ದು, ಅದಕ್ಕೆ ತಕ್ಕಂತೆ ಅಂಕಗಳನ್ನು ನಿಗದಿಪಡಿಸಲಾಗಿದೆ. ಒಂದು ತಂಡಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗಿದೆ. ವಿಜೇತರ ತಂಡಕ್ಕೆ ಬಹು ದೊಡ್ಡ ಮೊತ್ತದ ಬಹುಮಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಸುಮಾರು 5,000 ಮಂದಿಗೆ ಕುಳಿತುಕೊಳ್ಳಲು ಅವಕಾಶ ಇರುವ ಗ್ಯಾಲರಿ ನಿರ್ಮಾಣ ಮಾಡಲಾಗುತ್ತದೆ. ವಿನೂತನ ಕಲ್ಪನೆಯ ಎತ್ತರದ ಸ್ಟೇಜ್ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 15,000 ಮಂದಿ ಭಾಗವಹಿ ಸಲು ನಿರೀಕ್ಷೆ ಇದೆ. ಮೈದಾನಿನಲ್ಲಿ ತಿಂಡಿ-ತಿನಿಸು ಸೇರಿದಂತೆ ವಿವಿಧ ಮಾರಾಟ ಮಳಿಗೆಗಳು ಇರಲಿದೆ ಎಂದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು ಗಿರಿಧರ್ ಶೆಟ್ಟಿ, ಗೌರವ ಅಧ್ಯಕ್ಷರು ದಿವಾಕರ್ ಪಾಂಡೆಶ್ವರ,ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಮಂಜುಳ ರಾವ್,ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ ಜಗದೀಶ್ ಕದ್ರಿ ಲಲಿತ್ ಮೆಂಡನ್ ನರೇಶ್ ಪ್ರಭು ಸತೀಶ್ ಮಡಂಕಾಜೆ ಮೋಹನ್ ಪೂಜಾರಿ ವಿಜಯಕುಮಾರ್ ಶೆಟ್ಟಿ,ಮಾಜಿ ಮೇಯರ್ ಜಯನಂದ ಆಂಚನ್,ಕದ್ರಿ ಮನೋಹರ್ ಶೆಟ್ಟಿ, ಲಿಲಾವತಿ ಪ್ರಕಾಶ್,ವೀಣಾ ಮಂಗಳಾ,ಸಂದೀಪ್ ಗರೋಡಿ, ಶೈಲೇಶ್ ಶೆಟ್ಟಿ, ಅಶ್ವಥ್ ಹೊಯಿಗೆ ಬಜಾರ್,ರಮೇಶ್ ಹೆಗ್ಡೆ ,ನಿತಿನ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


