ಉಳ್ಳಾಲ : ಲಂಚುಲಾಲ್ ಕೆ ಎಸ್ ಅವರ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆ ಸಾರ್ಥಕ ಕ್ಷಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಸರಕಾರಿ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಕಲಿಕಾ ಕಿಟ್ ಹಾಗು ವಿದ್ಯಾರ್ಥಿಗಳ ಮನೆಗೆ ದಿನಸಿ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮ ಇಂದು ತೊಕ್ಕೊಟ್ಟಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಲಂಚುಲಾಲ್ ಕೆ ಎಸ್ ಅವರ ಈ ಕಾರ್ಯಕ್ರಮಕ್ಕೆ ಸರಿಸುಮಾರು 1000 ಕ್ಕೂ ಅಧಿಕ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.


ಬಳಿಕ ಮಾತನಾಡಿದ ಅಸ್ರ್ತ ಗ್ರೂಪ್ ನ ಅಧ್ಯಕ್ಷ ನನಗೆ ಒಂದು ಕಾಲದಲ್ಲಿ 4 ರೂ ಬಸ್ಸಿಗೆ ಹಣವಿರಲಿಲ್ಲ ಇದರಿಂದಾಗಿ ನನಗೆ ಜನರ ಕಷ್ಟ ಏನೆಂದರೆ ಗೊತ್ತು ಅದಕ್ಕಾಗಿ ಬಡ ಮಕ್ಕಳಿಗಾಗಿ ಇದೊಂದು ನನ್ನ ಸೇವೆ ಎಂದರು. ಸಮಾಜದಲ್ಲಿನ ಬಡವರ ಏಳಿಗೆಗೆ ನನ್ನೊಂದು ಕಾಣಿಕೆ ನನ್ನಿಂದ ಸಮಾಜಕ್ಕೆ ಯಾವ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಿದೆಯೋ ಅದನ್ನು ನಾನು ಮಾಡುತ್ತೆನೆ ಎಂದು ಹೇಳಿದರು. ಮಳೆಗಾಲದಲ್ಲಿ ಮನೆ ಮೇಲೆ ಮರ ಬಿದ್ದು ಮನೆ ಜರಿದಿದ್ದು ಮನೆಯನ್ನು ಸಂಪೂರ್ಣವಾಗಿ ಕಟ್ಟಿ ಕೊಡುವಂತಹ ಕಾರ್ಯ ವನ್ನು ಸಮಾಜ ಸೇವಕ ಕೊಡುಗೈ ದಾನಿ ಲಚ್ ಲಾಲ್ ರವರು ನೆರೆವೆಸುತ್ತೆನೆಂದು ತಿಳಿದಿದರು ಇವರ ಈ ಕಾರ್ಯಕ್ಕೆ ಶ್ಲಾಘಿಸಿದರು.
ಈ ವೇಳೆ ABC ತೊಕ್ಕೊಟ್ಟು ತಂಡವು ಲಂಚುಲಾಲ್ ರವರ ಸಮಾಜ ಸೇವೆಉ ಕಾರ್ಯಕ್ಕೆ ಶ್ಲಾಘಿಸಿದರು. ಮುಂದೆಯೂ ಇನ್ನಷ್ಟು ಬಡಜನರಿಗೆ ಸಹಾಯ ಮಾಡುವಂತಹ ಭಾಗ್ಯ ನಿಮಗೆ ದೊರಕಲಿ ಎಂದು ಆಶಿಸಿದರು.


