ಬೆಂಗಳೂರು : ಧರ್ಮಸ್ಥಳಕ್ಕೆ ಕಳಂಕ ತರುವ ಪಿತೂರಿಯ ಹಿಂದಿನ ರೂವಾರಿ ಸಸಿಕಾಂತ್ ಸೆಂಥಿಲ್ ಎಂದು ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನರೆಡ್ಡಿ ವಿರುದ್ಧ ತಮಿಳುನಾಡು ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್ ಬೆಂಗಳೂರಿನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸೆಂಥಿಲ್ ವಿರುದ್ಧ ನಾನೂ ಕಾನೂನು ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಬಳ್ಳಾರಿಯಲ್ಲಿ ಜನಾರ್ದನರೆಡ್ಡಿ ಕೂಡಾ ಗುಡುಗಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳಿಬ್ಬರ ಕಾನೂನು ಸಮರಕ್ಕೆ ವೇದಿಕೆ ಸಜ್ಜಾಗಿದೆ.
ಧರ್ಮಸ್ಥಳಕ್ಕೆ ಕಳಂಕ ತರುವ ಪಿತೂರಿಯ ಹಿಂದಿನ ರೂವಾರಿ ಸಸಿಕಾಂತ್ ಸೆAಥಿಲ್ ಎಂದು ಆರೋಪಕ್ಕೆ ಸಂಬAಧಿಸಿದAತೆ ಶಾಸಕ ಜನಾರ್ದನರೆಡ್ಡಿ
ವಿರುದ್ಧ ತಮಿಳುನಾಡು ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್ ಬೆAಗಳೂರಿನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಇದಕ್ಕೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರೆಡ್ಡಿ ಮಾನನಷ್ಡ ಮೊಕದ್ದಮೆ ಕೇಸ್ ಎದುರಿಸಿಲು ನಾನು ಸಿದ್ಧನಿದ್ದೇನೆ. ಅವರು ಪ್ರಾಮಾಣಿಕರಾಗಿದ್ದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿ ಎನ್ಐಎ ತನಿಖೆಗೆ ಕೊಡಿಸಲಿ ಎಂದು ಸವಾಲೆಸೆದಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳಿಬ್ಬರ ಕಾನೂನು ಸಮರಕ್ಕೆ ವೇದಿಕೆ ಸಜ್ಜಾಗಿದೆ. ಸಸಿಕಾಂತ್ ಸೆಂಥಿಲ್ ಹೈಕೋರ್ಟ್ ವಕೀಲ ಸೂರ್ಯ ಮುಕುಂದರಾಜ್ ಮತ್ತು ಸಂಜಯ್ ಯಾದವ್ ಅವರೊಂದಿಗೆ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ ಖುದ್ದಾಗಿ ಆಗಮಿಸಿ ದೂರು ದಾಖಲು ಮಾಡಿದ್ದಾರೆ. ಸೆಪ್ಟೆಂಬರ್ ೧೧ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಕಾನೂನಾತ್ಮಕವಾಗಿ ಉತ್ತರಿಸುವೆ: ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೆಂಥಿಲ್ ಅವರು, ಧರ್ಮಸ್ಥಳದ ವಿರುದ್ಧದ ಆರೋಪಗಳ ಹಿಂದಿನ ಮಾಸ್ಟರ್ ಮೈಂಡ್, ಸ್ಕ್ರಿಪ್ಟ್ ರೈಟರ್ ನಾನು ಎಂದು ಜನಾರ್ದನ ರೆಡ್ಡಿಯವರು ಆರೋಪಿಸಿದ್ದಾರೆ. ಸಂಸದನಾಗಿ ಸಾರ್ವಜನಿಕವಾಗಿ ಮತ್ತು ಕಾನೂನಾತ್ಮಕ ಉತ್ತರ ನೀಡಬೇಕಿರುವುದರಿಂದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. 10 ವರ್ಷ ಕರ್ನಾಟಕದಲ್ಲಿ ಕೆಲಸ ಮಾಡಿದ್ದೇನೆ. ಕರ್ನಾಟಕದ ಸಂಪತ್ತನ್ನ ಲೂಟಿ ಮಾಡಿ ೭ ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಇಂತಹ ವ್ಯಕ್ತಿಯ ಸುಳ್ಳು ಮಾತನ್ನು ನಿರ್ಲಕ್ಷಿಸಬಾರದೆಂಬ ಕಾರಣಕ್ಕೆ ಸಾರ್ವಜನಿಕ ಹಿತಾಸಕ್ತಿಯಿಂದ ರೆಡ್ಡಿ ಅವರ ವಿರುದ್ಧ ಮಾನನಷ್ಟ ದೂರು ಸಲ್ಲಿಸಿದ್ದೇನೆ. ನ್ಯಾಯಾಲಯದಲ್ಲಿ ಬಂದು ಉತ್ತರಿಸಲಿ ಎಂದರು.
ದೆಹಲಿಯಲ್ಲಿ ಭೇಟಿಯಾಗಿ ತಲೆ ಬುರುಡೆಯನ್ನ ನಾನೇ ಕೊಟ್ಟಿದ್ದೇನೆ ಎಂದಿದ್ದಾರೆ.
ಸಂಸದನಾಗಿ 1 ವರ್ಷವಾದರೂ ಈ ಸರ್ಕಾರ ನನಗೆ ದೆಹಲಿಯಲ್ಲಿ ಇನ್ನೂ ಮನೆಯನ್ನೇ ನೀಡಿಲ್ಲ, ನಾನಿನ್ನೂ ತಮಿಳುನಾಡಿನ ನಿವಾಸದಲ್ಲೇ ಇದ್ದೇನೆ.
ತಲೆಬುರುಡೆ ಎಲ್ಲಿ ಸಿಗುತ್ತದೆ ಎಂದೂ ನನಗೆ ಗೊತ್ತಿಲ್ಲ. ಬಹುಶಃ ಜನಾರ್ದನ ರೆಡ್ಡಿ ಯವರಿಗೆ ಗೊತ್ತಿರಬಹುದು ಎಂದು ತಿರುಗೇಟು ನೀಡಿದ್ದಾರೆ.


