Monday, June 22, 2026
Flats for sale
Homeವಾಣಿಜ್ಯಬೆಂಗಳೂರು : ಬಂಡವಾಳ ಹೂಡಿಕೆ ಕೊರತೆ, ಸರಕಾರದ ನೀತಿಯಿಂದ ದೇಶದಲ್ಲಿ ಒಂದೇ ವರ್ಷ 7500 ಸ್ಟಾರ್ಟಪ್‌ಗಳು...

ಬೆಂಗಳೂರು : ಬಂಡವಾಳ ಹೂಡಿಕೆ ಕೊರತೆ, ಸರಕಾರದ ನೀತಿಯಿಂದ ದೇಶದಲ್ಲಿ ಒಂದೇ ವರ್ಷ 7500 ಸ್ಟಾರ್ಟಪ್‌ಗಳು ಬಂದ್ !

ಬೆಂಗಳೂರು : ದೇಶದಲ್ಲಿ ಸ್ಟಾರ್ಟ್ಅಪ್‌ಗಳಿಗೆ ಸರ್ಕಾರ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿದ್ದರೂ ಕಳೆದ ಒಂದು ವರ್ಷದಲ್ಲಿ 7,4874 ಸ್ಟಾರ್ಟ್ಅಪ್‌ಗಳು ಹಣಕಾಸು ಕೊರತೆ ಸೇರಿದಂತೆ ಇತರೆ ಕಾರಣಗಳಿಂದ ಮುಚ್ಚಲ್ಪಟ್ಟಿವೆ ಎಂದು ವರದಿಯಾಗಿದೆ.

ಮಾರುಕಟ್ಟೆ ಗುಪ್ತಚರ ಸಂಸ್ಥೆ ಟ್ರಾಕ್ಸನ್‌ನ ದತ್ತಾಂಶದ ಪ್ರಕಾರ, ಜನವರಿ 2023ರಿಂದ ಇಲ್ಲಿಯವರೆಗೆ ಭಾರತದಲ್ಲಿ 65,906 ಕಂಪನಿಗಳು ಮುಚ್ಚಲ್ಪಟ್ಟಿದ್ದು, ಕಳೆದ ಒಂದು ವಾರದಲ್ಲೇ ಬ್ಲಿಪ್' ಎಂಬ ಕ್ವಿಕ್ ಫ್ಯಾಷನ್ ಡೆಲಿವರಿ ಪ್ಲಾಟ್‌ಫಾರ್ಮ್ ಮತ್ತುಕೋಡ್-ಪ್ಯಾರೆಟ್’ ಎಂಬ ಎಐ ಸ್ಟಾರ್ಟ್ಅಪ್ ಸೇರಿದಂತೆ ಎರಡು ಸ್ಟಾರ್ಟ್ಅಪ್‌ಗಳು ಕತ್ತಲೆಗೆ ಜಾರಿವೆ

ಕಂಪನಿಗಳು ಸೋಲಲು ಮುಖ್ಯ ಕಾರಣ ಬಂಡವಾಳ ಹೂಡಿಕೆ ಕೊರತೆ, ಹಣಕಾಸಿನ ಸವಾಲುಗಳು,ಮಾರುಕಟೆಯಲಿನ ಸ್ಪರ್ಧೆ,ಸರ್ಕಾರದ ನೀತಿಗಳ ಸಮಸ್ಯೆ ಹಾಗೂ ನಿರ್ವಹಣೆ ಗೊತ್ತಿಲ್ಲದಿರುವುದು ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ 9೦೦ ತೆಲಂಗಾಣದಲ್ಲಿ 3೦1,ಕರ್ನಾಟಕ 644, ಉ.ಪ್ರದೇಶದಲ್ಲಿ 487 ಹಾಗೂ ದೆಹಲಿಯಲ್ಲಿ 593 ಎಂದು 2024 ರ ಅಂಕಿಅಂಶದಲ್ಲಿ ಮಾಹಿತಿ ದೊರೆತಿದೆ.

ಸ್ಟಾರ್ಟ್ಅಪ್‌ಗಳು ಆವರ್ತ ನಿಧಿ ಹೊಂದಿದ ಬಳಿಕವೂ ಅವುಗಳಿಗೆ ಹಣಕಾಸಿನ ಕ್ರೋಡೀಕರಣ ಸುಲಭವಾದುದಲ್ಲ. ಅತಿಯಾಗಿ ಹಣ ಖರ್ಚು ಮಾಡುವುದು ಮತ್ತು ವೇಗವಾಗಿ ಬೆಳೆಯಬೇಕೆಂಬ ಒತ್ತಡ ಸ್ಟಾರ್ಟ್ಅಪ್ ಪರಿಸರಕ್ಕೆ ಕಳವಳಕಾರಿ ಸಂಗತಿಯಾಗಿದೆ. ಈ ಒತ್ತಡಕ್ಕೆ ಸಿಲುಕುವ ಅನೇಕ ಸ್ಟಾರ್ಟ್ಅಪ್ ಕಂಪನಿಗಳು ಹಣಕಾಸಿನ ನಿರ್ವಹಣೆಯನ್ನು ಸರಿಯಾಗಿ ಮಾಡುವಲ್ಲಿ ವಿಫಲವಾಗಿ ಕೊನೆಗೆ ಬಾಗಿಲು ಹಾಕುವಂಥ ಸ್ಥಿತಿಗೆ ತಳ್ಳಲ್ಪಡುತ್ತಿವೆ ಎನ್ನಲಾಗಿದೆ.

ಸ್ಪಷ್ಟ ಯೋಜನೆಯ ಕೊರತೆ, ಕೆಲವು ಸಂದರ್ಭಗಳಲ್ಲಿ ಕಳಪೆ ಕಾನೂನು ಮತ್ತು ಸಂಸ್ಥೆಯ ರಚನೆಯಲ್ಲಿ ದೋಷ ಹೊಂದಿರುವುದು ಸೇರಿದಂತೆ ಇತ್ಯಾದಿ ಕಾರಣಗಳು ಸ್ಟಾರ್ಟ್ಅಪ್‌ಗಳ ಸ್ಥಗಿತಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಟಿಎನ್‌ಐಇ ಅನೇಕ ಸಾಹಸೋದ್ಯಮ ಬಂಡವಾಳಶಾಹಿಗಳು ಮತ್ತು ಹೂಡಿಕೆದಾರರು ಚರ್ಚಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೂ' ಮತ್ತುಜೆರೋಧಾ’ದ ನಿತಿನ್ ಕಾಮತ್ ಬೆಂಬಲಿತ ಸ್ಟೋವಾ ಸ್ಕೂಲ್' ನಂತಹ ಸ್ಟಾರ್ಟ್ಅಪ್‌ಗಳು ಸಹ ಮುಚ್ಚಲ್ಪಟ್ಟಿವೆ.ಸ್ಟಾರ್ಟ್ಅಪ್‌ಗಳ ಮುಚ್ಚುವಿಕೆ ಅಸಾಮಾನ್ಯವಲ್ಲ, ಇದು ಯುವ ಪರಿಸರ ವ್ಯವಸ್ಥೆಯ ಪ್ರಬುದ್ಧವಾಗುವ ಒಂದು ಭಾಗವಾಗಿದೆ. ನಾವೀಗ ನೋಡುತ್ತಿರುವುದು ಆಂತರಿಕ ಮತ್ತು ಬಾಹ್ಯ ಸವಾಲುಗಳ ಮಿಶ್ರಣದಿಂದ ಉಂಟಾದ ತಿದ್ದುಪಡಿಯ ಅವಧಿಯಾಗಿದೆ ಎಂದು ಬರ್ಜಿಯಾನ್ ಲಾ ಸಂಸ್ಥಾಪಕಿ ರೋಮಾ ಪ್ರಿಯಾ ಹೇಳಿದ್ದಾರೆ. ಕೋಡ್-ಪ್ಯಾರೆಟ್‌ನ ಸಹ-ಸಂಸ್ಥಾಪಕ ವೇದಾAತ್ ಅಗರ್ವಾಲಾ ಲಿಂಕ್ಡ್ಇನ್ ಪೋಸ್ಟ್ನಲ್ಲಿ, `ನಾವು ಎಂಜಿನಿಯರ್‌ಗಳನ್ನು ನೇಮಿಸಿಕೊಂಡಿದ್ದೆವು. ನಷ್ಟದತ್ತ ಕಂಪನಿ ಸಾಗುತ್ತಿದ್ದರಿಂದ ಅನೇಕರನ್ನು ಕೆಲಸದಿಂದ ತೆಗೆದುಹಾಕಬೇಕಾಯಿತು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular