Sunday, July 13, 2025
Flats for sale
Homeದೇಶವಡೋಧರ : ಗುಜರಾತ್ ನ ವಡೋಧರದಲ್ಲಿ ಮಹಿಸಾಗರ ನದಿಗೆ ಕಟ್ಟಲಾಗಿರುವ ಗಂಭೀರ್ ಸೇತುವೆ ಹಠಾತ್ ಕುಸಿತ,...

ವಡೋಧರ : ಗುಜರಾತ್ ನ ವಡೋಧರದಲ್ಲಿ ಮಹಿಸಾಗರ ನದಿಗೆ ಕಟ್ಟಲಾಗಿರುವ ಗಂಭೀರ್ ಸೇತುವೆ ಹಠಾತ್ ಕುಸಿತ, ನದಿಗೆ ಬಿದ್ದ ಹಲವು ವಾಹನಗಳು, 10 ಜನರ ಸಾವು!

ವಡೋಧರ : ಗುಜರಾತ್ ವಡೋಧರದಲ್ಲಿ ಮಹಿಸಾಗರ ನದಿಗೆ ಕಟ್ಟಲಾಗಿರುವ ಗಂಭೀರ್ ಸೇತುವೆ ಹಠಾತ್ ಕುಸಿದು10 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಸಂಭವಿಸಿದೆ. ದುರಂತದಲ್ಲಿ ಹಲವರು ಗಾಯಗೊಂಡಿದ್ದಾರೆ.

ಮಹಿಸಾಗರ ನದಿಗೆ 4 ದಶಕಗಳ ಹಿಂದೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ವಾಹನಗಳು ಚಲಿಸುತ್ತಿದ್ದ ವೇಳೆ ಗಂಭೀರ ಸೇತುವೆಯ ಮಧ್ಯಭಾಗ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಸೇತುವೆ ಮೇಲೆ ಚಲಿಸುತ್ತಿದ್ದ ವಾಹನಗಳು ನೀರಿಗೆ ಬಿದ್ದು ಹಲವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ತಿಳಿಸಿದ್ದಾರೆ.

ಈ ಸೇತುವೆಯು ೧೯೮೫ರಲ್ಲಿ ನಿರ್ಮಾಣ ಮಾಡಲಾಗಿತ್ತು. ಸಮಯಕ್ಕೆ ಸರಿಯಾಗಿ ಸೇತುವೆಯು ನಿರ್ವಹಣೆ ಮಾಡಲಾಗಿತ್ತು. ಆದರೆ, ದುರಂತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು. ಈ ನಡುವೆ ಘಟನಾ ಸ್ಥಳಕ್ಕೆ ತಾಂತ್ರಿಕ ಪರಿಣತ ತಂಡವನ್ನು ರವಾನಿಸಿ ತನಿಖೆ ನಡೆಸಲು ಮುಖ್ಯಮಂತ್ರಿ ಭೂಪೇAದ್ರ ಪಟೇಲ್ ಆದೇಶಿಸಿದ್ದಾರೆ.

ಇಂದು ಬೆಳಿಗ್ಗೆ 7.3೦ಕ್ಕೆ ಈ ಅವಘಡ ಸಂಭವಿಸಿದೆ. ಎರಡು ಪಿಲ್ಲರ್ ನಡುವಿನ ಸ್ಲಾö್ಯಬ್ ಕುಸಿದಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. 2 ಟ್ರಕ್‌ಮತ್ತು ಒಂದು ವ್ಯಾನ್ ನದಿಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ, ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಸಗಿದರು. ಘಟನಾಸ್ಥಳದಲ್ಲಿ ಶೋಧಕಾರ್ಯ ಮುಂದುವರೆದಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಸ್ಥಳದಲ್ಲಿ ಬೀಡುಬಿಟ್ಟಿದೆ. 900 ಮೀ ಉದ್ದದ ಗಂಭೀರ ಸೇತುವೆಗೆ 23 ಪಿಲ್ಲರ್‌ಗಳಿವೆ. ಈ ಸೇತುವೆ ವಡೋಧರ ಮತ್ತು ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಗುಜರಾತ್‌ನ ಮೊರ್ಬಿ ಪ್ರದೇಶದ ಮಚ್ಚು ನದಿಯ ದಡದಲ್ಲಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿದು ಹಲವರು ಜಲ ಸಮಾಧಿಯಾಗಿದ್ದರು. 2020ರ ಅಕ್ಟೋಬರ್ 30 ರಂದು ನಡೆದ ಈ ಘಟನೆಯಲ್ಲಿ 135 ಮಂದಿ ಸಾವನ್ನಪ್ಪಿದ್ದರು. 2024ರ ಜ.18 ರಂದು ವಡೋಧರಾದ ಹರ್ಣಿ ಸರೋವರದಲ್ಲಿ ದೋಣಿ ದುರಂತ ಸಂಭವಿಸಿ 12 ಮಂದಿ ಮಕ್ಕಳು ಹಾಗೂ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದನ್ನು ಉಲ್ಲೇಖಿಸಿದರು.

ಪ್ರಧಾನಿ ಸಂತಾಪ
ಗಂಭೀರ್ ಸೇತುವೆ ಕುಸಿದು 10 ಮಂದಿ ಮೃತಪಟ್ಟಿರುವ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ
ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊAಡಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟ 10 ಮಂದಿಯ ಕುಟುಂಬ ಸದಸ್ಯರಿಗೆ ತಲಾ 2 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular