Sunday, July 13, 2025
Flats for sale
Homeಜಿಲ್ಲೆಮಂಗಳೂರು : ದ.ಕ.ಜಿ.ಪಂ ಸಿಇಒ ಡಾ.ಆನಂದ್ ವಿಜಯಪುರ ಡಿಸಿಯಾಗಿ ವರ್ಗಾವಣೆ,ನೂತನ ಸಿಇಒ ಆಗಿ ನಾರ್ವಾಡೆ ವಿನಾಯಕ್...

ಮಂಗಳೂರು : ದ.ಕ.ಜಿ.ಪಂ ಸಿಇಒ ಡಾ.ಆನಂದ್ ವಿಜಯಪುರ ಡಿಸಿಯಾಗಿ ವರ್ಗಾವಣೆ,ನೂತನ ಸಿಇಒ ಆಗಿ ನಾರ್ವಾಡೆ ವಿನಾಯಕ್ ಖಾರ್ಬರಿ ನೇಮಕ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಆನಂದ್ ಅವರನ್ನು ವರ್ಗಾವಣೆ ಮಾಡಿ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿ ಆದೇಶ ಹೊರಡಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೂತನ ಸಿಇಒ ಆಗಿ ನರ್ವಾಡೆ ವಿನಾಯಕ್ ಖಾರಬಾರಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿನಾಯಕ್ ಖರ್ಬರಿ ಈ ಹಿಂದೆ ಮಡಿಕೇರಿಯ ಮಡಿಕೇರಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.

2021 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಖರ್ಬರಿ, ತಮ್ಮ ಹಿಂದಿನ ಹುದ್ದೆಗಳಿಂದ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದು, ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular