Saturday, August 8, 2026
Homeರಾಜ್ಯಹಾಸನ : ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ ತಪ್ಪಿಸಲು ರಾತ್ರಿ ಎಂಟು ಗಂಟೆಗೆ ಬಾರ್ ಬಂದ್ ಮಾಡಬೇಕು...

ಹಾಸನ : ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ ತಪ್ಪಿಸಲು ರಾತ್ರಿ ಎಂಟು ಗಂಟೆಗೆ ಬಾರ್ ಬಂದ್ ಮಾಡಬೇಕು : ಶಾಸಕ ಎಚ್.ಡಿ ರೇವಣ್ಣ..!

ಹಾಸನ : ಕಳೆದ 46 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನದಲ್ಲಿ ಈ ಒಂದು ಸರಣಿ ಸಾವಿಗೆ ಮದ್ಯ ಸೇವನೆ ಅತಿಯಾದ ಮಾಂಸ ಸೇವನೆ ಕಾರಣ ಎಂದು ಶಾಸಕ ಎಚ್.ಡಿ ರೇವಣ್ಣ ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ಹೃದಯಘಾತದಿಂದ ಸರಣಿ ಸಾವು ವಿಚಾರವಾಗಿ ಹೃದಯಾಘಾತದಿಂದ ಸರಣಿ ಸಾವುಗಳಿಗೆ ಮಾಂಸಹಾರ ಸೇವನೆಯೇ ಕಾರಣ ಎಂದು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಚ್.ಡಿ ರೇವಣ್ಣ ಈ ಒಂದು ಹೇಳಿಕೆ ನೀಡಿದ್ದು, ಬೀಗರೂಟದಲ್ಲಿ ಅತಿಯಾಗಿ ರೆಡ್ ಮೀಟ್ ಸೇವನೆ ಮಾಡುತ್ತಿದ್ದಾರೆ ಎಂದರು. ಅಲ್ಲದೇ ಹಾಸನ ಜಿಲ್ಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಆದಾಯ ಬರುತ್ತೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ. ಬಾರ್ ನಲ್ಲಿ ಕುಡಿದು ಅನಾಹುತವಾಗುತ್ತಿದೆ ಎಂದು ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

Most Popular