Saturday, July 12, 2025
Flats for sale
Homeವಿದೇಶಗಾಜಾಪಟ್ಟಿ : ಗಾಜಾದಾದ್ಯಂತ ಇಸ್ರೇಲ್ ಸೇನೆಯಿಂದ ಗುಂಡಿನ ದಾಳಿ, 69 ಜನರ ಸಾವು..!

ಗಾಜಾಪಟ್ಟಿ : ಗಾಜಾದಾದ್ಯಂತ ಇಸ್ರೇಲ್ ಸೇನೆಯಿಂದ ಗುಂಡಿನ ದಾಳಿ, 69 ಜನರ ಸಾವು..!

ಗಾಜಾಪಟ್ಟಿ : ಗಾಜಾದಾದ್ಯಂತ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 69 ಜನರು ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಇಸ್ರೇಲ್ ಸೇನೆ, ಪ್ಯಾಲೆಸ್ತೇನಿಯನ್ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸಿದ ಪರಿಣಾಮ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಹಮಾಸ್ ನಡೆಸುವ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಗಾಜಾ ನಗರದಲ್ಲಿ ನಿರಾಶ್ರಿತ ಕುಟುಂಬಗಳಿಗೆ ಆಶ್ರಯವಾಗಿ ಪರಿವರ್ತಿಸಲಾದ ಶಾಲೆಯೊಂದರ ಮೇಲೆ ನಡೆದ ವಾಯುದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಇದಾಗಿದೆ.

೬೦ದಿನಗಳ ಕದನ ವಿರಾಮ ಅಂತಿಮಗೊಳಿಸಲು ಇಸ್ರೇಲ್ “ಅಗತ್ಯ ಷರತ್ತುಗಳಿಗೆ” ಒಪ್ಪಿಕೊಂಡಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಹೇ ಳಿದ್ದಾರೆ. ಅಮೆರಿಕಾ ಸರ್ಕಾರದ ಹೊಸ ಪ್ರಸ್ತಾವನೆಗಳನ್ನು ಹಮಾಸ್ ಸಂಘಟನೆ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದ್ದು ಇಸ್ರೇಲ್ ಜೊತೆ ಯುದ್ದ ಕೊನೆಗೊಳಿಸುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದೆ. ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ವಾಷಿಂಗ್ಟನ್‌ಗೆ ಪ್ರಯಾಣಿಸಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ಯಾಲೆಸ್ಟೀನಿಯನ್ ಸಶಸ್ತç ಗುಂಪನ್ನು ನಿರ್ಮೂಲನೆ ಮಾಡುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಗುಡುಗಿದ್ಧಾರೆ.

ಇಸ್ರೇಲ್ ರಕ್ಷಣಾ ಪಡೆಗಳು, ಕಳೆದ 24 ಗಂಟೆಗಳಲ್ಲಿ ಗಾಜಾದಾದ್ಯಂತ ಸುಮಾರು 150 “ಭಯೋತ್ಪಾದಕ ಗುರಿಗಳ” ಮೇಲೆ ದಾಳಿ ಮಾಡಿವೆ ಎಂದು ಹೇಳಿದೆ. ಅದೇ ಅವಧಿಯಲ್ಲಿ 118 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ

RELATED ARTICLES

LEAVE A REPLY

Please enter your comment!
Please enter your name here

Most Popular