Friday, November 22, 2024
Flats for sale
Homeಜಿಲ್ಲೆಪುತ್ತೂರು ; ಅಧಿಕಾರ ಇಲ್ಲದೇನೆ ಮಗನನ್ನು ಕೊಂದ, ಅಧಿಕಾರಕ್ಕೆ ಬಂದರೆ ಎಲ್ಲರನ್ನು ಕೊಲ್ಲುತ್ತಾನೆ ಈ ಪಾಪಿ....

ಪುತ್ತೂರು ; ಅಧಿಕಾರ ಇಲ್ಲದೇನೆ ಮಗನನ್ನು ಕೊಂದ, ಅಧಿಕಾರಕ್ಕೆ ಬಂದರೆ ಎಲ್ಲರನ್ನು ಕೊಲ್ಲುತ್ತಾನೆ ಈ ಪಾಪಿ. ಪ್ರವೀಣ್ ನೆಟ್ಟಾರ್ ಕುಟುಂಬ.

ಪುತ್ತೂರು ; ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಚುನಾವಣಾ ಟಿಕೆಟ್ ನೀಡಿದ ಹಿನ್ನಲೆ ಪ್ರವೀಣ್ ನೆಟ್ಟಾರು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಫಿ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದ SDPI ಹಿನ್ನೆಲೆ
ಯಾವುದೇ ಕಾರಣಕ್ಕೂ ಅವನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು,ಅನ್ಯಾಯವಾಗಿ ನಮ್ಮ ಮಗನನ್ನು ಕೊಂದ ಪಾಪಿ ಆತ,ಅಧಿಕಾರವಿಲ್ಲದೇ ಆತ ನಮ್ಮ ಮಗನನ್ನು ಕೊಂದ ,ನಾಳೆ ಅಧಿಕಾರ ಪಡೆದ ಬಳಿಕ ಎಲ್ಲರನ್ನೂ ಕೊಲ್ಲುತ್ತಾನೆ ಎಂದು ಮನನೊಂದ ತಾಯಿ ಅಕ್ರೋಶ ವ್ಯಕ್ತಪಡಿಸಿದರು.

ನಮಗೆ ಮನೆಯಿಂದ ಹೊರಗೆ ಹೋಗಲಾರದಂತ ಸ್ಥಿತಿ ನಿರ್ಮಿಸಬಹುದು,ನಮಗೆ ಇದ್ದ ಒಬ್ಬನೇ ಮಗನನ್ನು ಮುಗಿಸಿದ ಪಾಪಿ , ನಮಗೆ ಇಬ್ಬರಿಗೂ ಆರೋಗ್ಯ ಚೆನ್ನಾಗಿಲ್ಲ,ಪ್ರವೀಣ್ ತಂದೆಗೆ ಮೂರು ಬಾರಿ ಹಾರ್ಟ್ ಆಪರೇಷನ್ ಆಗಿದೆ

ಕಣ್ಣು ಕಾಣುದಿಲ್ಲ,ಕಿವಿ ಕೇಳೋದಿಲ್ಲ ನಮ್ಮನ್ನು ಈ ಸ್ಥಿತಿಗೆ ತಂದ ಉಗ್ರ ಆರೋಪಿಗೆ ಚುನಾವಣೆ ಸ್ಪರ್ಥಿಸಲು ಅವಕಾಶ ನೀಡಲೇ ಬಾರದು ಎಂದು ತಾಯಿ ಹಾಗೂ ತಂದೆ ಎಸ್.ಡಿ.ಪಿ.ಐ ವಿರುದ್ಧ ಹರಿಹಾಯ್ದರು….

RELATED ARTICLES

LEAVE A REPLY

Please enter your comment!
Please enter your name here

Most Popular