Thursday, July 23, 2026
Homeಜಿಲ್ಲೆಮಂಗಳೂರು ; ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ,ತಂದೆ,ಮಗಳಿಗೆ ಗಂಭೀರ ಗಾಯ..!

ಮಂಗಳೂರು ; ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ,ತಂದೆ,ಮಗಳಿಗೆ ಗಂಭೀರ ಗಾಯ..!

ಮಂಗಳೂರು : ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ನಡೆದ ಹಿನ್ನೆಲೆ ತಂದೆ,ಮಗಳಿಗೆ ಗಂಭೀರ ಗಾಯಗೊಂಡ ಘಟನೆದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುರ ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಮಂಗಳೂರು ಕಡೆಗೆ ಖಾಸಗಿ ಬಸ್ ತೆರಳುತ್ತಿದ್ದು,ಪುತ್ತೂರಿನಿಂದ ಕೆದಿಲ ಕಡೆಗೆ ಕಾರು ತೆರಳುತ್ತಿದ್ದ ಸಂದರ್ಭದಲ್ಲಿಮುರ ಎಂಬಲ್ಲಿ ಬಲಕ್ಕೆ ತೆಗೆದುಕೊಳ್ಳುವಾಗ ಕಾರಿನ ಹಿಂಬದಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿ ಹೊಡೆದಿದ್ದು ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಒಟ್ಟು ಮೂರು ಮಂದಿ ಪ್ರಯಾಣಿಕರಿದ್ದುತಂದೆ,ಮಗಳಿಗೆ ಗಂಭೀರ ಗಾಯವಾಗಿದ್ದು ಪವಾಡ ಸದೃಶ್ಯವಾಗಿ ಮಗು ಪಾರಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular