Thursday, July 23, 2026
Homeಜಿಲ್ಲೆಕಡಬ : ಕೆಎಸ್ಸಾರ್ಟಿಸಿ ಬಸ್- ಬೈಕ್ ನಡುವೆ ಅಪಘಾತ,ಬೈಕ್ ಸವಾರ ಸಾವು..!

ಕಡಬ : ಕೆಎಸ್ಸಾರ್ಟಿಸಿ ಬಸ್- ಬೈಕ್ ನಡುವೆ ಅಪಘಾತ,ಬೈಕ್ ಸವಾರ ಸಾವು..!

ಕಡಬ : ಬೈಕ್ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ ಹಿನ್ನೆಲೆ ಬೈಕ್‌ ಸವಾರ ಸಾವನಪ್ಪಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಹಳೇಸ್ಟೇಷನ್ ಬಳಿ ನಡೆದಿದೆ.

ಮೃತ ಯುವಕನನ್ನು ಕೋಡಿಂಬಾಳ ಗ್ರಾಮದ ಉದೇರಿ ನಿವಾಸಿ ದಿ. ಶ್ರೀಧರ ಗೌಡ ಎಂಬವರ ಪುತ್ರ ಬಿಶ್ವಜಿತ್(23) ಎಂದು ತಿಳಿದಿದೆ.

ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ವಿಶ್ವಜಿತ್ ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತ ಹಳೇಸ್ಟೇಷನ್ ಸಮೀಪದ ಕೃಷ್ಣನಗರ ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕನನ್ನುಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದಿದೆ.ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular