Tuesday, March 17, 2026
Flats for sale
Homeಜಿಲ್ಲೆಮಂಗಳೂರು : ಸ್ಥಳೀಯರ ಮಾತು ಲೆಕ್ಕಿಸದೆ ಮೂಡಬಿದಿರೆಯ ಎರುಗುಂಡಿ ಫಾಲ್ಸ್ ನ ಮೇಲ್ಬಾಗದಲ್ಲಿ ಪ್ರವಾಸಿಗರ ಹುಚ್ಚು...

ಮಂಗಳೂರು : ಸ್ಥಳೀಯರ ಮಾತು ಲೆಕ್ಕಿಸದೆ ಮೂಡಬಿದಿರೆಯ ಎರುಗುಂಡಿ ಫಾಲ್ಸ್ ನ ಮೇಲ್ಬಾಗದಲ್ಲಿ ಪ್ರವಾಸಿಗರ ಹುಚ್ಚು ಸಾಹಸ,ಕೊಚ್ಚಿಕೊಂಡು ಹೋಗಲಿದ್ದ ಐವರ ರಕ್ಷಣೆ..!

ಮಂಗಳೂರು : ರಾಜ್ಯದಲ್ಲಿ ಅವಧಿಗೂ ಮುನ್ನವೇ ಕಾಲಿಟ್ಟಿರುವ ಮುಂಗಾರು ಮಳೆ ಆರಂಭದಲ್ಲೇ ಅವಾಂತರಗಳನ್ನು ಸೃಷ್ಟಿಸಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ವರ್ಷಧಾರೆ ಸುರಿಯುತ್ತಿದ್ದು, ಈ ವರ್ಷ ಪೂರ್ವ ಮುಂಗಾರು ಮಳೆಯ ಅಬ್ಬರವೇ ಜನರನ್ನ ಹೈರಾಣಾಗಿಸಿದ್ದು, ಅದರ ಜತೆಗೇ ಈಗ ಮುಂಗಾರು ಸಹ ಸೇರಿಕೊಂಡಿದೆ.

ದ.ಕ ಜಿಲ್ಲೆಯಲ್ಲಿ ಬಾರಿ ಮಳೆಗೆ ಜಲಪಾತಗಳು ಧುಮ್ಮುಕ್ಕಿ ಹರಿಯುತ್ತಿರುವ ಹಿನ್ನೆಲೆ ಮೂಡಬಿದಿರೆಯ ಪುತ್ತಿಗೆ ಗ್ರಾಮದ ಪಾಲಡ್ಕ ಸಮೀಪದ ಎರುಗುಂಡಿ ಫಾಲ್ಸ್ ನಲ್ಲಿ ಸ್ಥಳೀಯರ ಮಾತು ಲೆಕ್ಕಿಸದೆ ಜಲಪಾತದ ಮೇಲ್ಭಾಗಕ್ಕೆ ಪ್ರವಾಸಿಗರು ಹೋಗಿ ಹುಚ್ಚು ಸಾಹಸ ಮೆರೆದಿದ್ದು ಜಲಪಾತದ ಮೇಲ್ಭಾಗದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಐವರ ರಕ್ಷಣೆ ಮಾಡಲಾಗಿದೆ. ಏಕಾಏಕಿ ನೀರು ಬಂದ ಹಿನ್ನಲೆ ಜಲಪಾತದ ಮೇಲ್ಭಾಗದ ಕಲ್ಲುಬಂಡೆಯಲ್ಲಿ ಪ್ರವಾಸಿಗರು ಸಿಲುಕಿದ್ದು ಸ್ಥಳೀಯರು ರೋಪ್ ಹಾಕಿ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ.ಜೀಲಾಡಳಿತ ಇಂತಹ ಪ್ರದೇಶಗಳಿಗೆ ಹೋಗಬಾರದೆಂದು ಸೂಚನೆ ನೀಡಿದರು ಕ್ಯಾರೇ ಎನ್ನದೆ ವರ್ತಿಸುವುದು ಹಲವು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular