ಬೀಜಿಂಗ್ : ಅಮೆರಿಕದ ಮತ್ತು ಚೀನಾ ನಡುವೆ ತೆರಿಗೆ ಸಮರ ಉಲ್ಬಣಗೊಂಡಿದ್ದು, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳಿಗೆ ಬೀಜಿಂಗ್ 84 %ನಷ್ಟು ತೆರಿಗೆಯನ್ನು ಘೋಷಿಸಿದೆ.
ಚೀನಾಗೆ ಮೊದಲೇ ಇದ್ದ ಶೇ.20ರಷ್ಟು ತೆರಿಗೆಗೆ ಟ್ರಂಪ್ ಮೊದಲು ಶೇ.೩೪ರಷ್ಟು ತೆರಿಗೆ ವಿಧಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಶೇ.34ರಷ್ಟು ತೆರಿಗೆಯನ್ನು ಅಮೆರಿಕದ ವಸ್ತುಗಳ ಮೇಲೆ ಹಾಕಿತು. ಟ್ರಂಪ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಶೇ.೫೦ರಷ್ಟು ತೆರಿಗೆ ಘೋಷಿಸಿತು. ಚೀನಾದ ವಸ್ತುಗಳ ಮೇಲೆ ಒಟ್ಟು 108 ಪರ್ಸೆಂಟ್‌ನಷ್ಟು ತೆರಿಗೆಯನ್ನು ಅಮೆರಿಕ ಹಾಕಿದಂತಾಗಿದ್ದು, ಬುಧವಾರದಿAದಲೇ ಇದು ಜಾರಿಗೆ ಬಂದಿದೆ.
ಸೇರಿಗೆ ಸವ್ವಾಸೇರು ಎನ್ನುವಂತೆ, ಅಮೆರಿಕ ವಿಧಿಸಿದ ಶೇ.೩೪ರಷ್ಟು ಹೆಚ್ಚುವರಿ ತೆರಿಗೆಗೆ ಪ್ರತಿಯಾಗಿ ಚೀನಾ ಕೂಡ ಶೇ.84ರಷ್ಟು ತೆರಿಗೆ ವಿಧಿಸಿ ಸವಾಲು ಹಾಕಿದೆ. ಗುರುವಾರದಿಂದಲೇ ಚೀನಾದ ತೆರಿಗೆ ಜಾರಿಯಾಗಲಿದೆ. ಇದರಿಂದ ವ್ಯಾಪಾರ ಕದನ ಉಲ್ಬಣಗೊಂಡಿದೆ. ಜೊತೆಗೆ ಚೀನಾ ಅಮೆರಿಕದ 12 ಅಮೆರಿಕದ ಕಂಪನಿಗಳನ್ನು ರಫ್ತು
ನಿಯಂತ್ರಣ ಪಟ್ಟಿಗೆ ಸೇರಿಸಿದ್ದು, ಈ ಕಂ;ಪನಿಗಳು ನಾಗರಿಕ ಮತ್ತು ಮಿಲಿಟರಿ ಎರಡರ ಬಳಕೆಗಾಗಿ ವಸ್ತುಗಳನ್ನು ತಯಾರಿಸುತ್ತವೆ. ಜೊತೆಗೆ ಅಮೆರಿಕದ ಆರು ಕಂಪನಿಗಳನ್ನು ನಂಬಲನರ್ಹ ಕಂಪನಿಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಕಂಪನಿಗಳಿಂದ ಚೀನಾದ ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಗೆ ತೊಂದರೆಯಾಗಬಹುದು ಎಂದಿದೆ. ಮುಖ್ಯವಾಗಿ ಚೀನಾ ವಿರೋಧದ ನಡುವೆಯೂ ತೈವಾನ್‌ಗೆ ಈ ಕಂಪನಿಗಳು ಶಸ್ತಾçಸ್ತçಗಳನ್ನು ಪೂರೈಸಿವೆ. ಹೀಗಾಗಿ ಇವುಗಳಿಗೆ ರಫ್ತನ್ನು ನಿರ್ಬಂಧಿಸಲಾಗಿದೆ.ನೆರವು ಕೋರಿದ ಚೀನಾ ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ನಾAದಿಯಾಗಿರುವ ಬೆನ್ನಲ್ಲೇ, ಭಾರತದ ನೆರವನ್ನು ಚೀನಾ ಕೋರಿದೆ.
ಭಾರತದಲ್ಲಿ ಚೀನಾ ರಾಯಭಾರಿಯಾಗಿರುವ ಯು ಜಿಂಗ್, ಎರಡೂ ದೇಶಗಳು ದೊಡ್ಡ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾಗಿದ್ದು, ಸಹಕಾರದಿಂದ ಉಭಯ ದೇಶಗಳಿಗೆ ಲಾಭವಿದೆ ಎಂದಿದ್ದಾರೆ.ತೆರಿಗೆ ಹೊಡೆತದಿಂದ ತಪ್ಪಿಸಿಕೊಂಡು ಶೂನ್ಯ ತೆರಿಗೆ ಪಾವತಿಸಲು ಶೀಘ್ರವೇ ಅಮೆರಿಕಾಗೆ ಬನ್ನಿ, ತಡ ಮಾಡಬೇಡಿ ಎಂದು ಕಂಪನಿಗಳಿಗೆ ಟ್ರಂಪ್ ಕರೆ ನೀಡಿದ್ದಾರೆ. ಆ್ಯಪಲ್ ಮತ್ತಿತರ ಕಂಪನಿಗಳAತೆ ಹಲವು ಕಂಪನಿಗಳು ದಾಖಲೆ ಪ್ರಮಾಣದಲ್ಲಿ ಬರತೊಡಗಿವೆ. ಪರಿಸರ ಅನುಮತಿ ತಡಮಾಡುವುದಿಲ್ಲ, ಎಲೆಕ್ಟಿçಕ್, ಇಂಧನ ತಕ್ಷಣವೇ ಅನುಮತಿ ದೊರೆಯುತ್ತದೆ ಎಂದಿದ್ದಾರೆ.