ಮಂಗಳೂರು ; ಅಕ್ರಮ ಮರಳು ದಂಧೆ ವಿರುದ್ದ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗರಂ ಆಗಿದ್ದಾರೆ.
ಅಕ್ರಮ ಮರಳು ದಂಧೆಯಿಂದ ತನ್ನ ಮನೆಗೆ ಹಾನಿಯಾಗತ್ತಾ ಇದೆ ಎಂದು ಶಾಸಕ ಖಾದರ್ ಮುಂದೆ ಮಂಗಳೂರು ಹೊರವಲಯದ ರಾಣಿಪುರದ ನಿವಾಸಿ ಕಣ್ಣೀರು ಇಟ್ಟಿದ್ದಾರೆ .
ತಕ್ಷಣ ಫೋನ್ ಮಾಡಿ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ಮತ್ತು ಎಸಿಪಿಗೆ ತರಾಟೆಗೆ ತೆಗೆದುಕೊಂಡು ಉಳ್ಳಾಲ ಪೊಲೀಸರಿಗೆ ಯು.ಟಿ.ಖಾದರ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
‘ಪೊಲೀಸರು ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ, ನಾಚಿಗೆ ಇಲ್ವಾ?’
‘ರಾಣಿಪುರ ಮುಖಾಂತರವೇ ಅಕ್ರಮವಾಗಿ ಮರಳು ಹೋಗ್ತಾ ಇದೆ’
‘ನಿಮ್ಮ ಚೆಕ್ಕಿಂಗ್ ಎಲ್ಲಾ ನಮಗೆ ಗೊತ್ತಿದೆ, ತಕ್ಷಣ ರೈಡ್ ಮಾಡಿ’
‘ಪೊಲೀಸರನ್ನ ಮರಳಿನವರು ಕಂಟ್ರೋಲ್ ಮಾಡ್ತಿದಾರಾ? ಅವರಿಗೆ ಯಾಕೆ ಹೆದರ್ತೀರಾ? ”ಒಂದು ವಾರದಿಂದ ಊರವರು ಇಲ್ಲಿ ಬಂದು ಕೂಗ್ತಾರೆ, ನಿಮಗೆ ನಿಲ್ಲಿಸಲು ಆಗಲ್ವಾ?’ ‘ಪೊಲೀಸರು ಸರಿ ಇದ್ರೆ ಇದೆಲ್ಲಾ ಆಗುತ್ತಾ? ನೀವೇ ಖುದ್ದು ಹೋಗಿ ನಿಲ್ಲಿಸಿ’ ಅಂತ ಎಸಿಪಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು ಹೊರವಲಯದ ಅಂಬ್ಲಮೊಗರು, ಮುನ್ನೂರು ಭಾಗದಲ್ಲಿ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದ್ದು , ಉಳಿಯ ನದಿ ಪಾತ್ರಗಳಲ್ಲಿ ವ್ಯಾಪಕ ಮರಳು ದಂಧೆ ಸರಾಗವಾಗಿ ಸಾಗುತ್ತಿದೆ ಟ್ರಾಫಿಕ್ ಪೋಲಿಸ್ ನಿಂದ ಹಿಡಿದು ಸ್ಟೇಷನ್ ವರೆಗೂ ಎಲ್ಲರಿಗೂ ಮಾಮೂಲಿ ಜೋರಾಗಿ ಸುವ್ವಾಸನೆ ಬಿರಿತ್ತಿದೆ ಎಂದು ಸಾರ್ವಜನಿಕರ ಮಾತು.


