Saturday, November 23, 2024
Flats for sale
Homeಜಿಲ್ಲೆಮಂಗಳೂರು: ಇನ್ನೂ ಎಷ್ಟು ವರ್ಷ ಬೇಕಾಗಬಹುದು ಡಿಸಿ ಕಚೇರಿ ಕಾಮಗಾರಿ ಸಂಪೂರ್ಣಗೊಳಿಸಲು ?

ಮಂಗಳೂರು: ಇನ್ನೂ ಎಷ್ಟು ವರ್ಷ ಬೇಕಾಗಬಹುದು ಡಿಸಿ ಕಚೇರಿ ಕಾಮಗಾರಿ ಸಂಪೂರ್ಣಗೊಳಿಸಲು ?

ಮಂಗಳೂರು ; ಪಡೀಲ್ ಬಳಿ ನಿರ್ಮಾಣವಾಗುತ್ತಿರುವ ಡಿ.ಸಿ ಕಛೇರಿ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯಿತ್ತಿದ್ದು ಮಂಜೂರಾತಿ ಇಲ್ಲದ ಕಾರಣ ಗುತ್ತಿಗೆದಾರರಿಗೆ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಹೆಸರಿಗೆ ನಾಲ್ಕೈದು ಕೂಲಿ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2020 ರಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಫೆಬ್ರವರಿ 2022 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ್ದರು. ಆದರೆ, ಸರಕಾರದಿಂದ ಆಗಬೇಕಾದ ಕೆಲಸಗಳು ಆಮೆ ಗತಿಯಲ್ಲಿ ನಡೆಯುತ್ತಿವೆ.

ಎರಡನೇ ಹಂತದಲ್ಲಿ ಫಿನಿಶಿಂಗ್, ವಿದ್ಯುತ್ ಪೂರೈಕೆ, ವಿದ್ಯುತ್ ಕಾಮಗಾರಿ, ಕಟ್ಟಡದ ಮೇಲಿರುವ ಅಶೋಕ ಪಿಲ್ಲರ್, ಎರಡು ಲಿಫ್ಟ್, ಹವಾನಿಯಂತ್ರಿತ ಸಭಾಂಗಣ, ಪೀಠೋಪಕರಣಗಳು, ಕೇಬಲ್ ನೆಟ್‌ವರ್ಕ್, ಮಳೆ ನೀರಿಗಾಗಿ ಪೈಂಟಿಂಗ್ ಮತ್ತು ಚರಂಡಿ ಅಭಿವೃದ್ಧಿ, ಕಾಂಪೌಂಡ್ ವಾಲ್ ಮತ್ತು ಇಂಟರ್ ಲಾಕ್. ಕ್ಯಾಂಪಸ್ ಮಾಡಬೇಕಾಗಿದೆ.

ಕರ್ನಾಟಕ ಗೃಹ ಮಂಡಳಿ ಎಇಇ ವಿಜಯಕುಮಾರ್ ಮಾತನಾಡಿ, ‘ಡಿಸಿ ಕಚೇರಿ ಸಂಕೀರ್ಣದ ಮೊದಲ ಹಂತದ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿಗೆ 29 ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಅನುಮೋದನೆ ದೊರೆತರೆ ಎಂಟರಿಂದ 10 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ.

ಸಮಾಜ ಸೇವಕ ಹನುಮಂತ ಕಾಮತ್‌ ಮಾತನಾಡಿ, ‘ಸರ್ಕಾರ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಿತ್ತು. ಮುಖ್ಯವಲ್ಲದ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿ, ಅಗತ್ಯ ಯೋಜನೆಗಳನ್ನು ಬಾಕಿ ಉಳಿಸಿಕೊಂಡಿದೆ. ಚುನಾವಣೆಗೂ ಮುನ್ನ ಉಳಿದ ಅನುದಾನ ಬಿಡುಗಡೆ ಮಾಡಬೇಕು.

ಇಲ್ಲಿ ಕೊನೆಗೆ ಉಳಿಯುವ ಪ್ರಶ್ನೆ ಇನ್ನೂ ಎಷ್ಟು ವರ್ಷ ಬೇಕಾಗಬಹುದೆಂದು.

RELATED ARTICLES

LEAVE A REPLY

Please enter your comment!
Please enter your name here

Most Popular