ಮಂಗಳೂರು ; ಮಂಗಳೂರು ನಗರದ ಬಿಜೈ ಕಾಪಿಕಾಡ್ ನಾಲ್ಕನೇ ಅಡ್ಡ ರಸ್ತೆಯ ಪೂನಂ ಪಾರ್ಕ್ ಅಪಾರ್ಟ್ಮೆಂಟ್ ಖಾಸಗಿ ಫ್ಲಾಟ್ ವೊಂದರ ಕೊಠಡಿಯಲ್ಲಿ ಹಿರಿಯ ದಂಪತಿಗಳ ಮೃತದೇಹ ಪತ್ತೆಯಾಗಿದೆ. ಮೃತರು ನಿವೃತ್ತ ಬ್ಯಾಂಕ್ ಮ್ಯಾನೇಜರ್ ದಿನೇಶ್(67) ಮತ್ತು ಪತ್ನಿ ಶೈಲಜಾ(64) ಮೃತದೇಹ ಎಂದು ತಿಳಿಯಲಾಗಿದೆ. ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯ ಮನೆಯ ಬೆಡ್ ರೂಂನಲ್ಲಿ ಮೃತದೇಹ ಪತ್ತೆಯಾಗಿದ್ದು ,ಕಳೆದ ಆರು ವರ್ಷಗಳಿಂದ ಪತ್ನಿ ಶೈಲಜಾ ಅನಾರೋಗ್ಯ ಹಿನ್ನೆಲೆ ಹಾಸಿಗೆ ಹಿಡಿದಿದ್ದರು. ಪತ್ನಿ ಶೈಲಜಾ ಹತ್ಯೆಗೈದು ಪತಿ ದಿನೇಶ್ ನೇಣು ಬಿಗಿದ ಸ್ಥಿತಿಯಲ್ಲಿ ದಿನೇಶ್ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.