Friday, March 14, 2025
Flats for sale
Homeಸಿನಿಮಾಮುಂಬೈ : 60 ನೇ ವರ್ಷಕ್ಕೆ ಹೊಸ ಗೆಳತಿಯ ಸಂಗದಲ್ಲಿ ಅಮೀರ್ ಖಾನ್..!

ಮುಂಬೈ : 60 ನೇ ವರ್ಷಕ್ಕೆ ಹೊಸ ಗೆಳತಿಯ ಸಂಗದಲ್ಲಿ ಅಮೀರ್ ಖಾನ್..!

ಮುಂಬೈ : ಆಮಿರ್ ಖಾನ್ 60 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಆದರೆ ಮಾರ್ಚ್ 12 ರಂದು ನಟನ ಮನೆಯಲ್ಲಿ ಹುಟ್ಟುಹಬ್ಬದ ಪೂರ್ವ ಆಚರಣೆಯನ್ನು ನಡೆಸಲಾಗಿದೆ.

ಬಾಲಿವುಡ್‌ನ ಟಾಪ್ ಹೀರೋ ಆಮಿರ್ ಖಾನ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ದಂಗಲ್ ಮತ್ತು ಪಿಕೆ ಚಿತ್ರಗಳ ಮೂಲಕ ಅವರು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹುಟ್ಟುಹಬ್ಬದಂದು ಎಲ್ಲರಿಗೂ ಶಾಕ್ ನೀಡಿದ್ದಾರೆ. ಅವರು ತಮ್ಮ ಹೊಸ ಗೆಳತಿಯನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದಾರೆ.

ಮುಂಬೈನ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ನಟ ತನ್ನ ಗೆಳತಿ ಗೌರಿ ಸ್ಪಾçಟ್ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದಾರೆ. ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿ ಇರುವುದಾಗಿ ಬಾಲಿವುಡ್ ನಟ ಅಮೀರ್ ಖಾನ್ ತಿಳಿಸಿದ್ದಾರೆ. ನಟ ಪಾಪರಾಜಿಗಳಿಗೆ ಗೌರಿಯ ಫೋಟೋಗಳನ್ನು ತೆಗೆದುಕೊಳ್ಳದಂತೆ ವಿನಂತಿಸಿದ್ದಾರೆ.

ಮುAಬೈನಲ್ಲಿರುವ ತಮ್ಮ ಮನೆಯಲ್ಲಿ ತನ್ನ ಗೆಳತಿಯನ್ನು ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಿಗೆ ಪರಿಚಯಿಸಿದ್ದಾಗಿ ನಟ ಹೇಳಿದ್ದಾರೆ. ಗೌರಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ಅವರು ಬೆಂಗಳೂರಿನವರಾಗಿದ್ದು, ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ನಾನು ಪ್ರತಿದಿನ ಅವರಿಗಾಗಿ ಹಾಡುಗಳನ್ನು ಹಾಡುತ್ತೇನೆ ಎಂದಿದ್ದಾರೆ.

ಎರಡು ಮದುವೆಯಾಗಿ ವಿಚ್ಛೇಧನ ಪಡೆದಿರುವ ಅಮೀರ್ ಖಾನ್ ಅವರು ಬೆಂಗಳೂರಿನ ಬೆಡಗಿ ಆರು ವರ್ಷದ ಮಗುವಿನ ತಾಯಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅವರು ಗೌರಿಯನ್ನು 25 ವರ್ಷಗಳಿಂದ ಬಲ್ಲೆ ಎಂದಿದ್ದಾರೆ ಮತ್ತು ನಮ್ಮ ಸಂಬಂಧ ಪ್ರಾರಂಭವಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.ಗೌರಿ ಬಗ್ಗೆ ಮಾತನಾಡುವಾಗ, ಆಮಿರ್ ಲಗಾನ್ ನ ತಮ್ಮ ಪಾತ್ರ ಭುವನ್ ಬಗ್ಗೆಯೂ ಪ್ರಸ್ತಾಪಿಸಿ, ಭುವನ್ ತನ್ನ ಗೌರಿಯನ್ನು ಕಂಡುಕೊAಡಿದ್ದಾನೆ ಎಂದು ಹೇಳಿದ್ದಾರೆ. ಲಗಾನ್‌ನಲ್ಲಿ ಗ್ರೇಸಿ ಸಿಂಗ್ ಪಾತ್ರದ ಹೆಸರು ಗೌರಿ ಎಂಬುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular