Sunday, July 13, 2025
Flats for sale
Homeವಿದೇಶಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ಒಂದೇ ದಿನ ದಾಖಲೆ ಪ್ರಮಾಣದ 267 ಡ್ರೋನ್‌ ಮೂಲಕ...

ಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ಒಂದೇ ದಿನ ದಾಖಲೆ ಪ್ರಮಾಣದ 267 ಡ್ರೋನ್‌ ಮೂಲಕ ದಾಳಿ..!

ಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ಒಂದೇ ದಿನ ದಾಖಲೆ ಪ್ರಮಾಣದ 267 ಡ್ರೋನ್‌ಗಳಿಂದ ದಾಳಿ ನಡೆಸಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭವಾಗಿ 3 ವರ್ಷ ತುಂಬುತ್ತಿದ್ದು, ಅದಕ್ಕೂ ಒಂದು ದಿನ ಮುಂಚಿತವಾಗಿ ಈ ದಾಳಿ ನಡೆಸಲಾಗಿದೆ. ಉಕ್ರೇನ್ 20 ಡ್ರೋನ್‌ಗಳಿಂದ ದಾಳಿ ನಡೆಸಿದೆ ಎಂದು ರಷ್ಯಾ ಕೂಡ ಆರೋಪಿಸಿದೆ.

ಉಕ್ರೇನ್‌ನ 13 ಪ್ರದೇಶಗಳನ್ನು ಗುರಿಯನ್ನಾಗಿಟ್ಟುಕೊಂಡು ಈ ದಾಳಿ ನಡೆದಿದ್ದು, ಮೃತಪಟ್ಟವರ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಎಮರ್ಜೆನ್ಸಿ ಸೇವೆಗಳಿಗೆ ಬಂದಿರುವ ಮಾಹಿತಿಯಂತೆ ಮೂವರು ಸತ್ತಿದ್ದಾರೆ. ಮುಖ್ಯವಾಗಿ ಮೂಲಸೌಕರ್ಯವನ್ನು ಗುರಿಯನ್ನಾಗಿಟ್ಟುಕೊಂಡು ಆಕ್ರಮಣ ಮಾಡಲಾಗಿದೆ.

ಇದಕ್ಕೆ ತಕ್ಷಣವೇ ಸ್ಪಂದಿಸಿರುವ ದೇಶದ ತುರ್ತುಸೇವೆಗಳಿಗೆ ಧನ್ಯವಾದ ಅರ್ಪಿಸಿದ್ದು, ಶಾಂತಿ ನೆಲೆಸುವ ಸಲುವಾಗಿ ಯೂರೋಪ್ ಮತ್ತು ಅಮೆರಿಕ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಪೈಕಿ 138 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಉಳಿದಂತೆ 119 ಡ್ರೋನ್‌ಗಳು ನಿಗದಿತ ಗುರಿ ಸೇರದೆ ಪತನಗೊಂಡಿವೆ ಎಂದಿದ್ದಾರೆ. ಒಂದೇ ವಾರದಲ್ಲಿ 1150 ಡ್ರೋನ್, 14೦೦ ಬಾಂಬ್ ಮತ್ತು 35 ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular