Sunday, February 23, 2025
Flats for sale
Homeಜಿಲ್ಲೆಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ 800 ಕೊಠಡಿ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ತೀರ್ಮಾನ..!

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ 800 ಕೊಠಡಿ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ತೀರ್ಮಾನ..!

ಬೆಂಗಳೂರು : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದು ಕೊಠಡಿಗಳ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ 4 ಬ್ಲಾಕ್‌ನಲ್ಲಿ 200 ಕೊಠಡಿಗಳನ್ನ ನಿರ್ಮಿಸಲು ತೀರ್ಮಾನಿಸಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಹಂತಹಂತ ವಾಗಿ ಅನುಷ್ಠಾನಗೊಳಿಸಿ, ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಒದಗಿಸುವ ಹಾಗೂ ಶ್ರೀ ಕ್ಷೇತ್ರವನ್ನು ಮತ್ತಷ್ಟು ಸಾರ್ವಜನಿಕ ಸ್ನೇಹಿಯಾಗಿಸಲು
ಮಾಸ್ಟರ್ ಪ್ಲಾನ್ ರೂಪಿಸಲು ಸಭೆ ಹಾಗೂ ಹೊಸದಾಗಿ ಸಮಿತಿ ರಚನೆ ಸಂಬAಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸಿದ್ದು, ಅದರಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಕ್ಷೇತ್ರಕ್ಕೆ ಆಗಮಿಸುವ ಭಕ್ತಾಭಿಮಾನಿಗಳಿಗೆ ಕೊಠಡಿಗಳ ಕೊರತೆ ಉಂಟಾದ ಹಿನ್ನೆಲೆ 200 ಕೊಠಡಿಗಳ 4 ಬ್ಲಾಕ್ ನಲ್ಲಿ ನಿರ್ಮಿಸಲು ತೀರ್ಮಾನಿಸಿದ್ದು800 ಕೊಠಡಿಗಳ 4 ಸಂಕೀರ್ಣ ಹಾಗೂ 50 ಕೊಡತಿಗಳ ಡಾರ್ಮೆಟರಿ ನಿರ್ಮಿಸಲು ಉದ್ದೇಸಲಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಅನ್ವಯ ಅಧಿಕಾರಿ, ಅಧಿಕಾರೇತರ ಸದಸ್ಯ ರನ್ನು ಮತ್ತು ಹೆಚ್ಚುವರಿಯಾಗಿ ೩ ಜನ ಸದಸ್ಯರ ನ್ನೊಳಗೊಂಡAತೆ ಮೇಲ್ವಿಚಾರಣಾ ಸಮಿತಿ ರಚಿಸಿ ಆದೇಶಿಸಲಾಗಿದೆ.

ರಥಬೀದಿ ನವೀಕರಣ ಹಾಲಿ ಇರುವ ರಥದ ಬೀದಿಯನ್ನು ಮತ್ತಷ್ಟು ವಿಸ್ತಾರ ಮಾಡಲು ಉದ್ದೇಶಿಸ ಲಾಗಿದೆ. ಉತ್ತಮ ವಿನ್ಯಾಸದಲ್ಲಿ ಸ್ಥಳೀಯ ಸಂಸ್ಕೃತಿ ಬಿಂಬಿಸುವ ದೇವಾ ಲಯದ ವಿನ್ಯಾಸಕ್ಕೆ ಸರಿ ಹೊಂದುವಂತೆ ಒಂದು ಉತ್ತಮವಾದ ರಥದ ಬೀದಿಯಲ್ಲಿ ಭಕ್ತರು ಕೂರಲು ಉತ್ತಮ ವ್ಯವಸ್ಥೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಭಕ್ತಾಧಿಗಳು ಸರತಿ ಸಾಲಿನಲ್ಲಿ ಹೋಗಲು ಅನುವಾಗುವಂತೆ ಕ್ಯೂ ಲೈನ್ ಕಾಂಪ್ಲೆಕ್ಸ್ ನಿರ್ಮಿಸಲೂ ಕೂಡಾ ಉದ್ದೇಶಿಸಲಾಗಿದೆ.

ದೇವಾಲಯದಲ್ಲಿ ಸುತ್ತು ಗೋಪುರ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.ಇದನ್ನು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯದ ಕಟ್ಟಡ ವಿನ್ಯಾಸಕ್ಕೆ ಸರಿಹೊಂದುವಂತೆ ಮರು ವಿನ್ಯಾಸ ಮಾಡಿ ಅನುಮತಿ ಪಡೆದು ನೀಎಮಿಸಲು ತರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ,

RELATED ARTICLES

LEAVE A REPLY

Please enter your comment!
Please enter your name here

Most Popular